ಪಕ್ಷದ ನಾಯಕರೊಬ್ಬರ ಜೊತೆಗಿದ್ದ ಫೋಟೋವೊಂದು ಬಹಿರಂಗ ಆದ ಬಳಿಕ ಬಿಜೆಪಿ ಮಹಿಳಾ ನಾಯಕಿಯೊಬ್ಬರು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಅಸ್ಸಾಂ ಬಿಜೆಪಿ ಘಟಕದ ಕಿಸಾನ್ ಮೋರ್ಚಾದ ಕಾರ್ಯದರ್ಶಿ ಇಂದ್ರಾಣಿ ತಹಬೀಲ್ದಾರ್ ಆತ್ಮಹತ್ಯೆ ಮಾಡಿಕೊಂಡ ನಾಯಕಿ.
ಗುವಾಹಟಿಯಲ್ಲಿ ತಮ್ಮ ನಿವಾಸದಲ್ಲಿ ಶುಕ್ರವಾರ ಆಕೆಯ ಸಾವಿಗೆ ಶರಣಾಗಿದ್ದಾರೆ. ಪೊಲೀಸರು ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮಾಹಿತಿಗಳ ಪ್ರಕಾರ ಔಷಧದ ಓವರ್ಡೋಸ್ನಿಂದ ಸಾವಾಗಿದೆ ಎನ್ನಲಾಗಿದೆ.
ತಹಬೀಲ್ದಾರ್ ಅವರು ಅಸ್ಸಾಂ ಬಿಜೆಪಿಯಲ್ಲಿ ಪ್ರಮುಖ ಮಹಿಳಾ ನಾಯಕಿಯಾಗಿದ್ದರು. ಈಕೆ ವಾಣಿಜ್ಯೋದ್ಯಮಿಗಳ ಸಂಘದ ಉಪಾಧ್ಯಕ್ಷರೂ ಆಗಿದ್ದರು.
ಮನೆಯಲ್ಲಿ ಬಾಡಿಗೆಗಿದ್ದ ಬಿಜೆಪಿ ಮುಖಂಡ:
ಅಸ್ಸಾಂ ಕಿಸಾನ್ ಮೋರ್ಚಾದ ಪದಾಧಿಕಾರಿಯೊಬ್ಬರ ಜೊತೆಗೆ ಇಂದ್ರಾಣಿ ಅವರು ಇದ್ದ ಫೋಟೋವೊಂದು ವೈರಲ್ ಆಗಿತ್ತು. ಈ ಬಿಜೆಪಿ ಮುಖಂಡ ಇಂದ್ರಾಣಿ ಮನೆಯಲ್ಲಿ ಬಾಡಿಗೆಗಿದ್ದ.
ADVERTISEMENT
ADVERTISEMENT