ಬಿಜೆಪಿ ಮುಖಂಡನ ಹಾಗೂ ಚಿನ್ನದ ಅಂಗಡಿಯ ಮಾಲೀಕ ಜಗನ್ನಾಥ್ (Bjp Leader Jagannath Shetty) ಅವರ ಹನಿ ಟ್ರ್ಯಾಪ್ ಪ್ರಕರಣಕ್ಕೆ ಹೊಸ ತಿರುವು ದೊರೆತಿದೆ.
ಪ್ರತಿಷ್ಠಿತ ಚಿನ್ನದ ವ್ಯಾಪಾರಿ ಜಗನ್ನಾಥ ಶೆಟ್ಟಿಯವರು ಎಫ್ಐಆರ್ನಲ್ಲಿ ಉಲ್ಲೇಖಿಸಿದ ಅಂಶವೇ ಬೇರೆ, ಅಂದು ಅಸಲಿಗೆ ನಡೆದದ್ದೇ ಬೇರೆ ಎಂಬ ಮಾಹಿತಿ ಇದೀಗ ಹೊರಬಿದ್ದಿದೆ. ಜಗನ್ನಾಥ್ ಶೆಟ್ಟಿಯವರೇ, ಯುವತಿಯ ಜೊತೆ ಲಾಡ್ಜ್ಗೆ ಹೋಗಿ ಹನಿಟ್ರ್ಯಾಪ್ ಕಥೆ ಕಟ್ಟಿದ್ದಾರೆ ಎನ್ನುವ ಪ್ರಶ್ನೆಗಳು ಮೂಡಿಬರುತ್ತಿವೆ.
ಮೈಸೂರಿನ ದರ್ಶನ್ ಲಾಡ್ಜ್ಗೆ ಏಕಾಏಕಿ ಸಲ್ಮಾ ಗ್ಯಾಂಗ್ ನುಗ್ಗಿದ್ದು ಈ ವೇಳೆ ಯುವತಿ ಜೊತೆ ರೆಡ್ ಹ್ಯಾಂಡಾಗಿ ಚಿನ್ನದ ವ್ಯಾಪಾರಿ ಹಾಗೂ ಬಿಜೆಪಿ ಮುಖಂಡ ಜಗನ್ನಾಥ್ ಶೆಟ್ಟಿ ಸಿಕ್ಕಿಬಿದ್ದಿದ್ದಾರೆ.
ಕಾಲೇಜ್ ಲೆಕ್ಚರರ್ ಎಂದು ಲಾಡ್ಜ್ ಪಡೆದಿದ್ದ ಜಗನ್ನಾಥ್, ಯುವತಿ ಜೊತೆ ಲಾಡ್ಜ್ನಲ್ಲಿದ್ದರು. ಈ ವಿಚಾರ ತಿಳಿದು ಅಲರ್ಟ್ ಆದ ಸಲ್ಮಾ ಗ್ಯಾಂಗ್ ತಕ್ಷಣ ಮೈಸೂರಿನ ದರ್ಶನ್ ಲಾಡ್ಜ್ಗೆ ನುಗ್ಗಿದ್ದಾರೆ. ಒಳ ನುಗ್ಗುತ್ತಿದ್ದಂತೆ ಗ್ಯಾಂಗ್ ವಿಡಿಯೋ ಚಿತ್ರೀಕರಣ ಮಾಡಿದ್ದಾರೆ. ಯುವತಿ ಹಾಗೂ ಜಗನ್ನಾಥ ಶೆಟ್ಟಿಗೆ ಮನಬಂದಂತೆ ಥಳಿಸಿದ್ದಾರೆ. ಈ ಸಂಬಂಧದ ಆಡಿಯೋ ಹಾಗೂ ವಿಡಿಯೋಗಳು ವೈರಲ್ ಆಗುತ್ತಿವೆ.
ಸದ್ಯ ಜಗನ್ನಾಥ ಶೆಟ್ಟಿಯವರ ನಡೆ ಹಲವು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ. ಹನಿಟ್ರ್ಯಾಪ್ ಆರೋಪಿಗಳು ಎನ್ನಲಾದ ಮೂವರು ಆರೋಪಿಗಳನ್ನು ಪೊಲೀಸರು ಜೈಲಿಗಟ್ಟಿದ್ದು, ಮಂಡ್ಯ ಪಶ್ಚಿಮ ವಿಭಾಗ ಠಾಣೆಯಲ್ಲಿ ಕೇಸ್ ದಾಖಲಾಗಿತ್ತು.
ಅಂದು ನಡೆದ ಘಟನೆ ಏನು..?
ಜಗನ್ನಾಥ ಶೆಟ್ಟಿ (Bjp Leader Jagannath Shetty) ಮಂಗಳೂರಿಗೆ ತೆರಳಲು ಮಂಡ್ಯದಲ್ಲಿ ಬಸ್ಗಾಗಿ ಕಾಯುತ್ತಿದ್ದರು. ಚಿನ್ನದ ಪರೀಕ್ಷೆಗೆಂದು ಜಗನ್ನಾಥ್ರನ್ನು ಅಪಹರಿಸಿದ್ದ ಗ್ಯಾಂಗ್ 4 ಕೋ.ರೂಗೆ ಬೇಡಿಕೆ ಇಟ್ಟಿತ್ತು. ಅಂದು, ಅಂತಿಮವಾಗಿ 50 ಲಕ್ಷ ನೀಡಿ ತೆರಳಿದ್ದಾರೆ. ಆದರೆ, ಆ ಗ್ಯಾಂಗ್ ಮತ್ತೆ ಹಣಕ್ಕೆ ಬೇಡಿಕೆ ಇಟ್ಟ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಬಿಜೆಪಿ ಮುಖಂಡ, ಧಾರ್ಮಿಕ ಪರಿಷತ್ ಸದಸ್ಯ ಹಾಗೂ ಮಂಡ್ಯದ ಶ್ರೀನಿಧಿ ಗೋಲ್ಡ್ ಮಾಲೀಕ ಜಯನಾಥ್ ಶೆಟ್ಟಿಯವರು ಹನಿಟ್ರ್ಯಾಪ್ ಮಾಡಿದ್ದಾರೆ ಎಂದು ದೂರು ಸಲ್ಲಿಸಿದ್ದರು.
ಹಿನಿಟ್ರ್ಯಾಪ್ಗೆ ಸಿಲುಕಿಸಿ 50 ಲಕ್ಷ ಸುಲಿಗೆ ಮಾಡಿದ್ದಾರೆ. ಅಲ್ಲದೇ, ಮತ್ತೆ ಹಣ ನೀಡುವಂತೆ ಬೆದರಿಕೆ ಹಾಕುತ್ತಿದ್ದಾರೆ ಎಂದು ಜಗನ್ನಾಥ್ ಶೆಟ್ಟಿ ಮಂಡ್ಯದ ಪಶ್ಚಿಮ ಪೊಲೀಸ್ ಠಾಣೆಗೆಯಲ್ಲಿ ದೂರು ದಾಖಲಿಸಿದ್ದರು. ಇದನ್ನೂ ಓದಿ : ದಕ್ಷಿಣ ಕನ್ನಡ ಜಿಲ್ಲೆಯ BJP ಮುಖಂಡನಿಗೆ ಹನಿ ಟ್ರ್ಯಾಪ್ – ಮಹಿಳೆ ಬಂಧನ