ಮೈಸೂರು (Mysuru, Mysore) ಮಹಾನಗರ ಪಾಲಿಕೆಯಲ್ಲಿ (Mayor Election) ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ (BJP-JDS alliance) ಮಾಡಿಕೊಂಡಿದೆ. ಈ ಎರಡೂ ಪಕ್ಷಗಳ ಮೈತ್ರಿಯಿಂದಾಗಿ ಬಿಜೆಪಿಯ ಶಿವಕುಮಾರ್ (Mayor Shivakumar) ಅವರು ಮೈಸೂರು ಪಾಲಿಕೆಯ ಹೊಸ ಮೇಯರ್ ಆಗಿ ಆಯ್ಕೆ ಆಗಿದ್ದಾರೆ.
ಮೇಯರ್ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾಗಿತ್ತು. ಜೆಡಿಎಸ್ ಅಭ್ಯರ್ಥಿ ಕೆ ವಿ ಶ್ರೀಧರ್ (JDS Candidate) ನಾಮಪತ್ರ ಪಡೆದ ಕಾರಣ ಕಾಂಗ್ರೆಸ್-ಬಿಜೆಪಿ ನಡುವೆ ಹಣಾಹಣಿ ಏರ್ಪಟ್ಟಿತ್ತು.
ಕಾಂಗ್ರೆಸ್ನ (Congress) ಮೇಯರ್ ಅಭ್ಯರ್ಥಿ ಸೈಯದ್ ಹಸರತ್ಉಲ್ಲಾ ಅವರಿಗೆ 28 ಮತಗಳು ಸಿಕ್ಕಿದವು. ಬಿಜೆಪಿ ಮೇಯರ್ ಅಭ್ಯರ್ಥಿ ಶಿವಕುಮಾರ್ಗೆ 47 ಮತಗಳು ಸಿಕ್ಕಿದವು.
ಜೆಡಿಎಸ್ಗೆ ಮುಖಭಂಗ:
ಆದರೆ ಜೆಡಿಎಸ್ಗೆ ಮೈತ್ರಿಯ ಹೊರತಾಗಿಯೂ ಮುಖಭಂಗವಾಗಿದೆ. ಉಪ ಮೇಯರ್ ಸ್ಥಾನಕ್ಕೆ ಜೆಡಿಎಸ್ನ ರೇಷ್ಮಾ ಭಾನು ಅವರು ಸಲ್ಲಿಸಿದ್ದ ನಾಮಪತ್ರ ಜಾತಿಪ್ರಮಾಣದ ಕಾರಣದಿಂದ ತಿರಸ್ಕೃತಗೊಂಡಿದೆ. ಹೀಗಾಗಿ ಉಪ ಮೇಯರ್ ಆಗಿ ರೂಪಾ ಯೋಗೇಶ್ ಆಯ್ಕೆ ಆಗಿದ್ದಾರೆ.
ಈ ಮೂಲಕ ಮೈಸೂರು ಪಾಲಿಕೆಯಲ್ಲಿ ಇದೇ ಮೊದಲ ಬಾರಿಗೆ ಬಿಜೆಪಿ ಮೇಯರ್ ಮತ್ತು ಉಪಮೇಯರ್ ಪಟ್ಟ ಎರಡನ್ನೂ ಅಲಂಕರಿಸಿದೆ.
ADVERTISEMENT
ADVERTISEMENT