BREAKING: ನಾಳೆ ನಡೆಯಬೇಕಿದ್ದ ಬಿಜೆಪಿ ಸರ್ಕಾರದ ಜನೋತ್ಸವ ಮುಂದೂಡಿಕೆ

ನಾಳೆ ನಡೆಯಬೇಕಿದ್ದ ಜನೋತ್ಸವ ಕಾರ್ಯಕ್ರಮವನ್ನು ಸಿಎಂ ಬಸವರಾಜ ಬೊಮ್ಮಾಯಿ ಸರ್ಕಾರ ಮುಂದೂಡಿದೆ.
ನಾಳೆ ಬದಲು ಅಂದರೆ ಸೆಪ್ಟೆಂಬರ್​​ 8ರ ಬದಲು ಸೆಪ್ಟೆಂಬರ್​​ 11ರಂದು ದೊಡ್ಡಬಳ್ಳಾಪುರದಲ್ಲಿ ಜನೋತ್ಸವ ಕಾರ್ಯಕ್ರಮ ನಡೆಯಲಿದೆ.
ಆಹಾರ ಮತ್ತು ಅರಣ್ಯ ಸಚಿವ ಉಮೇಶ್​ ಕತ್ತಿ ನಿಧನ ಹಿನ್ನೆಲೆಯಲ್ಲಿ ಇವತ್ತು ಬೆಳಗ್ಗೆಯಷ್ಟೇ ಒಂದು ದಿನದ ಮಟ್ಟಿಗೆ ಶೋಕಾಚಾರಣೆ ಘೋಷಿಸಿ ಸಿಎಂ ಬೊಮ್ಮಾಯಿ ಸರ್ಕಾರ ಆದೇಶಿಸಿತ್ತು.
ಆ ತೀರ್ಮಾನವನ್ನು ಮಧ್ಯಾಹ್ನದ ವೇಳೆಗೆ ಬದಲಿಸಿರುವ ಬೊಮ್ಮಾಯಿ ಸರ್ಕಾರ ಮೂರು ದಿನಕ್ಕೆ ವಿಸ್ತರಿಸಿದೆ. ಸೆಪ್ಟೆಂಬರ್​ 10ರವರೆಗೂ ರಾಜ್ಯದಲ್ಲಿ ಶೋಕಾಚಾರಣೆ ಜಾರಿಯಲ್ಲಿರಲಿದೆ.

LEAVE A REPLY

Please enter your comment!
Please enter your name here