ಸಂಘಟನಾತ್ಮಕ ಬದಲಾವಣೆಯ ಭಾಗವಾಗಿ ಬಿಜೆಪಿ (BJP) ರಾಜ್ಯ ಘಟಕಗಳಲ್ಲಿ ಹೊಸ ಅಧ್ಯಕ್ಷರನ್ನು ನೇಮಕ ಮಾಡಿದೆ.
ಉತ್ತರಪ್ರದೇಶ ಬಿಜೆಪಿ (Uttarpradesh BJP) ಘಟಕದ ಅಧ್ಯಕ್ಷರನ್ನಾಗಿ ಭೂಪೆಂದ್ರ ಸಿಂಗ್ ಚೌಧರಿ (Bhupendra Singh Chaudhary) ಅವರನ್ನು ನೇಮಕ ಮಾಡಿದೆ.
ಇವರು ಉತ್ತರಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ (Yogi Adityanath) ಸರ್ಕಾರದಲ್ಲಿ ಸಚಿವರು ಮತ್ತು ವಿಧಾನಪರಿಷತ್ ಸದಸ್ಯರು. ಜಾಟ್ ಸಮುದಾಯಕ್ಕೆ ಸೇರಿದವರು.
ಈ ಹಿಂದೆ ಬಿಜೆಪಿ ರಾಜ್ಯಾಧ್ಯಕ್ಷರಾಗಿದ್ದ ಒಬಿಸಿ ಸಮುದಾಯದ ಸ್ವತಂತ್ರದೇವ್ ಸಿಂಗ್ ಅವರು ರಾಜೀನಾಮೆ ನೀಡಿದ್ದರು.
ಉತ್ತರಪ್ರದೇಶದ ಉಪ ಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ (Keshav Prasad Maurya) ಅವರಿಗೆ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ ಸಿಗಲಿದೆ ಎಂದು ಭಾವಿಸಲಾಗಿತ್ತು ಮತ್ತು ಕೆಲ ದಿನಗಳ ಹಿಂದೆಯಷ್ಟೇ ಸಂಘಟನೆಯೇ ಎಲ್ಲಕ್ಕಿಂತಲೂ ದೊಡ್ಡದು ಎಂದು ಟ್ವೀಟಿಸಿದ್ದರು. ಆದರೆ ಅವರಿಗೆ ಈಗ ನಿರಾಸೆ ಆಗಿದೆ.
ರಾಜೀವ್ ಭಟ್ಟಾಚಾರ್ಯ ಅವರನ್ನು ತ್ರಿಪುರ (Tripura) ಬಿಜೆಪಿ ಘಟಕದ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ.
ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ ಸುದಾನ್ ಸಿಂಗ್ ಅವರನ್ನು ಹಿಮಾಚಲಪ್ರದೇಶದ ಚುನಾವಣಾ ಉಸ್ತುವಾರಿಯನ್ನಾಗಿ ಮಾಡಲಾಗಿದೆ.
ದೇವೇಂದ್ರ ಸಿಂಗ್ ರಾಣಾ ಅವರನ್ನು ಹಿಮಾಚಲಪ್ರದೇಶ ಜಂಟಿ ಚುನಾವಣಾ ಉಸ್ತುವಾರಿಯನ್ನಾಗಿ ನೇಮಕ ಮಾಡಲಾಗಿದೆ.