ಬಿಜೆಪಿ ಆಡಳಿತವಿರುವ ಹರಿಯಾಣ ರಾಜ್ಯದ ನೂಹ್ನಲ್ಲಿ ನಡೆದಿರುವ ಹಿಂಸಾಚಾರ ಸಂಬಂಧ ಭಜರಂಗ ದಳದ ಮುಖಂಡ ರಾಜ್ ಕುಮಾರ್ ಅಲಿಯಾಸ್ ಬಿಟ್ಟು ಭಜರಂಗಿಯನ್ನು ಬಂಧಿಸಲಾಗಿದೆ.
ನೂಹ್ ಪೊಲೀಸರು ಬಿಟ್ಟು ಭಜರಂಗಿಯನ್ನು ಆತನ ಊರು ಫರಿದಾಬಾದ್ನಲ್ಲಿರುವ ಮನೆಯಿಂದ ಬಂಧಿಸಲಾಗಿದೆ.
ಈತನ ವಿರುದ್ಧ ಎಸಿಪಿ ಉಷಾ ಕುಂಡು ಅವರು ಸರ್ದಾರ್ ನೂಹ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಹಲ್ಲೆ ಮತ್ತು ಸಾರ್ವಜನಿಕ ಅಧಿಕಾರಿಗೆ ಕರ್ತವ್ಯ ನಿರ್ವಹಣೆಗೆ ಅಡ್ಡಿಪಡಿಸಿದ್ದು, ಸರ್ಕಾರಿ ಅಧಿಕಾರಿಗೆ ಹಾನಿ ಉಂಟು ಮಾಡುವುದು, ದಂಗೆ ಮತ್ತು ಶಸ್ತ್ರಾಸ್ತ್ರ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.
ಜುಲೈ 17ರಂದು ನೂಹ್ನಲ್ಲಿ ಕೋಮು ಹಿಂಸಾಚಾರ ಸಂಭವಿಸಿತ್ತು.
ಹಣ್ಣು ಮತ್ತು ತರಕಾರಿ ವ್ಯಾಪಾರಿಯಾಗಿರುವ ಬಿಟ್ಟು ಹರಿಯಾಣದಲ್ಲಿ ಕಳೆದ ಮೂರು ವರ್ಷದಿಂದ ಗೋರಕ್ಷ ಭಜರಂಗ್ ಪಡೆಯನ್ನು ನಡೆಸುತ್ತಿದ್ದ. ಕಳೆದ ತಿಂಗಳಲ್ಲೇ ಈತನ ವಿರುದ್ಧ ಕೋಮು ದ್ವೇಷ ಪ್ರಚೋದನೆ ಆರೋಪದಡಿಯಲ್ಲಿ ಮೂರು ಪ್ರಕರಣ ದಾಖಲಿಸಲಾಗಿತ್ತು.
ADVERTISEMENT
ADVERTISEMENT