ಕಾರ್ಕಳ: ಖಾಸಗಿ ಬಸ್​ಗೆ ಬೈಕ್​ ಡಿಕ್ಕಿ – ಸವಾರ ಸಾವು

ಕಾರ್ಕಳದಲ್ಲಿ ಸಂಭವಿಸಿದ ಖಾಸಗಿ ಬಸ್​ ಮತ್ತು ಬೈಕ್​ ನಡುವಿನ  ಅಪಘಾತದಲ್ಲಿ ಬೈಕ್​ ಸವಾರ ಮೃತಪಟ್ಟಿದ್ದಾರೆ.

ಕಾರ್ಕಳದ ನಿವಾಸಿ 26 ವರ್ಷದ ಕಾರ್ತಿಕ್​ ಮೃತ ಬೈಕ್​ ಸವಾರ.

ಬೈಲೂರು ಕೆಳಪೇಟೆಯಲ್ಲಿ ಹೆಚ್​ಎಂಟಿ ಆಶಾಲತಾ ಹೆಸರಿನ ಖಾಸಗಿ ಬಸ್​ಗೆ ಬೈಕ್​ ಡಿಕ್ಕಿಯಾಗಿತ್ತು. ತಮ್ಮ ಕೆಲಸ ಮುಗಿಸಿ ಮನೆಗೆ ವಾಪಸ್​ ಆಗುತ್ತಿದ್ದಾಗ ಕಾರ್ತಿಕ್​ ಅವರ ಬೈಕ್​ ಬಸ್​ಗೆ ಡಿಕ್ಕಿ ಹೊಡೆದಿದೆ.

ಮೃತ ಕಾರ್ತಿಕ್​ ಅವರಿಗೆ ಪತ್ನಿ ಮತ್ತು 10 ತಿಂಗಳ ಮಗು ಇದೆ.