ಬಿಹಾರದಲ್ಲಿ ಚಲಿಸುವ ಬಸ್ನಲ್ಲಿ 17 ವರ್ಷದ ಅಪ್ರಾಪ್ತ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬಸ್ ಚಾಲಕ, ನಿರ್ವಾಕರನನ್ನು ಸೇರಿದಂತೆ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಮಂಗಳವಾರ ಬಿಹಾರದ ಚಂಪಾರಣ್ ಜಿಲ್ಲೆಯ ಮೋತಿಹಾರಿ ಬಸ್ ನಿಲ್ದಾಣದಲ್ಲಿದ್ದ ಯುವತಿ ಪಶ್ಚಿಮ ಚಂಪಾರಣ್ನಲ್ಲಿರುವ ಬೆತಿಯಾಗೆ ಪ್ರಯಾಣಿಸಲು ಕಾಯುತ್ತಿದ್ದಳು. ಈ ವೇಳೆ ಬಸ್ ಚಾಲಕ ಬೆತಿಯಾಗೆ ಹೋಗುವುದಾಗಿ ಬಾಲಕಿಯನ್ನು ಬಸ್ಗೆ ಹತ್ತಿಸಿಕೊಂಡಿದ್ದ. ಬಸ್ ಸಂಚರಿಸುವ ವೇಳೆ ಆರೋಪಿಗಳು ಬಾಲಕಿಗೆ ಪ್ರಜ್ಞೆ ತಪ್ಪುವ ಪಾನಿಯ ಕುಡಿಸಿದ್ದಾರೆ. ಬಳಿಕ ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ ಎಂದು ಪೊಲೀಸರು ವಿವರಿಸಿದ್ದಾರೆ.
ಈ ಬಗ್ಗೆ ಪೊಲೀಸರಿಗೆ ಹೇಳಿಕೆ ನೀಡಿರುವ ಬಾಲಕಿ, ನಾನು ಎಚ್ಚರಗೊಂಡಾಗ ಬಸ್ ಒಳಗಡೆ ಇದ್ದೆ. ಬಸ್ನ ಎಲ್ಲಾ ಕಿಟಕಿಗಳು ಹಾಗೂ ಬಾಗಿಲನ್ನು ಮುಚ್ಚಲಾಗಿತ್ತು ಎಂದು ಹೇಳಿದ್ದಾಳೆ.
ಅದೇ ರಸ್ತೆಯಲ್ಲಿ ಚಲಿಸುತ್ತಿದ್ದ ಜನರು ಬಾಲಕಿಯನ್ನು ರಕ್ಷಣೆ ಮಾಡಿ ಪೊಲೀಸರಿಗೆ ತಿಳಿಸಿದ್ದಾರೆ. ಈ ಕೃತ್ಯದಲ್ಲಿ ಭಾಗಿಯಾಗಿದ್ದ ಬಸ್ನ ಚಾಲಕ, ನಿರ್ವಾಹಕ ಮತ್ತು ಸಹಾಯಕ ಸೇರಿದಂತೆ ನಾಲ್ವರನ್ನು ಬಂಧಿಸಲಾಗಿದೆ. ಕೃತ್ಯಕ್ಕೆ ಬಳಸಿದ ಬಸ್ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.