ರಾಹುಲ್​ ಗಾಂಧಿ, ಕುಮಾರಸ್ವಾಮಿ ಜೊತೆಗೆ ನಿತೀಶ್​ ಕುಮಾರ್​ ಭೇಟಿ

Bihar CM Nitish Kumar meets Congress leader Rahul Gandhi
Bihar CM Nitish Kumar meets Congress leader Rahul Gandhi
ಬಿಹಾರದಲ್ಲಿ (Bihar) ಬಿಜೆಪಿ ಜೊತೆಗೆ ಮೈತ್ರಿ ಮುರಿದುಕೊಂಡು ಆರ್​ಜೆಡಿ ಮತ್ತು ಕಾಂಗ್ರೆಸ್​ ಜೊತೆಗೆ ಮೈತ್ರಿ ಮಾಡಿಕೊಂಡ ಬಳಿಕ ಈಗ ಮುಖ್ಯಮಂತ್ರಿ ನಿತೀಶ್​ ಕುಮಾರ್​ (CM Nitish Kumar) ಅವರು ವಿರೋಧ ಪಕ್ಷಗಳನ್ನು (Opposition Parties) ಒಟ್ಟುಗೂಡಿಸುವ ಪ್ರಯತ್ನಕ್ಕೆ ಮುಂದಾಗಿದ್ದಾರೆ.
ಇದರ ಭಾಗವಾಗಿ ನಿತೀಶ್​ ಕುಮಾರ್​ ಇವತ್ತು ನವದೆಹಲಿಯ ತುಘಲಕ್​ ರಸ್ತೆಯಲ್ಲಿರುವ ಕಾಂಗ್ರೆಸ್ (Congress)​ ನಾಯಕ ರಾಹುಲ್​ ಗಾಂಧಿ (Rahul Gandhi) ನಿವಾಸಕ್ಕೆ ತೆರಳಿ ಮಾತುಕತೆ ನಡೆಸಿದರು.
ಜೊತೆಗೆ ದೆಹಲಿಯಲ್ಲಿರುವ ಮಾಜಿ ಪ್ರಧಾನಮಂತ್ರಿ ಹೆಚ್​ ಡಿ ದೇವೇಗೌಡರ (H D Devegowda) ನಿವಾಸದಲ್ಲಿ ಮಾಜಿ ಮುಖ್ಯಮಂತ್ರಿ ಹೆಚ್​ ಡಿ ಕುಮಾರಸ್ವಾಮಿ (H D Kumarswamy) ಮತ್ತು ಜೆಡಿಎಸ್​ (JDS) ರಾಜ್ಯಾಧ್ಯಕ್ಷ ಸಿ ಎಂ ಇಬ್ರಾಹಿಂ ( C M Ibrahim) ಅವರನ್ನು ಭೇಟಿ ಆದರು. ಈ ವೇಳೆ ಜೆಡಿಯು (JDU) ರಾಜ್ಯಾಧ್ಯಕ್ಷರಾದ ಮಹಿಮಾ ಪಟೇಲ್ (Mahima Patel)​ ಕೂಡಾ ಇದ್ದರು.

ರಾಹುಲ್​ ಗಾಂಧಿ ಭೇಟಿ ಬಳಿಕ ಮಾತಾಡಿದ ನಿತೀಶ್​ ಕುಮಾರ್​ ತಾವು ಪ್ರಧಾನಮಂತ್ರಿ ಗಾದಿಯ ಮೇಲೆ ಕಣ್ಣಿಟ್ಟಿಲ್ಲ ಎಂದು ಸ್ಪಷ್ಟಪಡಿಸಿದರು.
Bihar CM Nitish Kumar meets JDS leader, ex CM H D Kumarswamy
Bihar CM Nitish Kumar meets JDS leader, ex CM H D Kumarswamy
ಪ್ರಾದೇಶಿಕ ಪಕ್ಷಗಳನ್ನು (Regional Parties) ದುರ್ಬಲಗೊಳಿಸುವ ಪ್ರಯತ್ನಗಳು ಆಗುತ್ತಿವೆ. ನನ್ನ ಗಮನ ಇರುವುದು ಲೋಕಸಭಾ ಚುನಾವಣೆಗೂ (Loksabha Election) ಮೊದಲು ವಿರೋಧ ಪಕ್ಷಗಳನ್ನು ಒಟ್ಟುಗೂಡಿಸುವುದರ ಮೇಲೆ. ನನ್ನನ್ನು ನಾನು ಪ್ರಧಾನಮಂತ್ರಿ ಅಭ್ಯರ್ಥಿ ಎಂದು ಬಿಂಬಿಸಿಕೊಳ್ಳುವ ಉದ್ದೇಶ ನನಗಿಲ್ಲ
ಎಂದರು.
Bihar CM Nitish Kumar meets JDS leader, ex CM H D Kumarswamy

LEAVE A REPLY

Please enter your comment!
Please enter your name here