ಬಿಹಾರ ಸಿಎಂ ನಿತೀಶ್​ಗೆ ಬೈಕ್ ಡಿಕ್ಕಿ ಹೊಡೆಸಲು ಯತ್ನ – ಕೂದಲೆಳೆ ಅಂತರದಲ್ಲಿ ಪಾರು

ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್​ ಅವರ ಭದ್ರತೆಯಲ್ಲಿ ಭಾರೀ ವೈಫಲ್ಯ ಉಂಟಾಗಿರುವುದು ಭಾರೀ ಕಳವಳಕ್ಕೆ ಕಾರಣವಾಗಿದೆ.

ಸಿಎಂ ನಿತೀಶ್ ಕುಮಾರ್ ಇಂದು ಬೆಳಗ್ಗೆ ವಾಕ್ ಮಾಡಲೆಂದು ಮನೆಯಿಂದ ಹೊರ ಬಂದ ಸಂದರ್ಭದಲ್ಲಿ ಬೈಕಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಅವರಿಗೆ ಡಿಕ್ಕಿ ಹೊಡೆಸಲು ಯತ್ನಿಸಿದ್ದಾರೆ.

ಮುಖ್ಯಮಂತ್ರಿಗಳ ಭದ್ರತಾ ಕೋಟೆಯನ್ನು ಛೇದಿಸಿಕೊಂಡು  ಬಂದ ದುಷ್ಕರ್ಮಿ ಬೈಕರ್​ಗಳು ನಿತೀಶ್ ಕುಮಾರ್​ಗೆ ಡಿಕ್ಕಿ ಹೊಡೆಸಲು ನೋಡಿದ್ದಾರೆ.

 ಕೂಡಲೇ ಎಚ್ಚೆತ್ತ ಸಿಎಂ ನಿತೀಶ್ ಕುಮಾರ್​ ಪಕ್ಕದಲ್ಲೇ ಇದ್ದ ಫುಟ್​ಪಾತ್ ಮೇಲೆ ಜಿಗಿದು ಅಪಾಯದಿಂದ ಪಾರಾಗಿದ್ದಾರೆ.

ಈ ಘಟನೆ ನಿತೀಶ್ ಅಭಿಮಾನಿಗಳ ಆತಂಕಕ್ಕೆ ಕಾರಣವಾಗಿದೆ. ಪೊಲೀಸರು ತನಿಖೆ ನಡೆಸಿದ್ದಾರೆ.