ADVERTISEMENT
ಇಂದಿನಿಂದ ಬಿಗ್ ಬಾಸ್ ಸೀಸನ್-9 ವಿದ್ಯುಕ್ತವಾಗಿ ಆರಂಭವಾಗಿದೆ. ಅಲ್ಲದೇ ಕನ್ನಡದ ಮೊದಲ 24*7 ಒಟಿಟಿ ವೇದಿಕೆ ವೂಟ್ ನಲ್ಲಿ ಬಿಗ್ ಬಾಸ್ ಪ್ರಸಾರವಾಗಲಿದೆ.
ಸಂಖ್ಯಾಶಾಸ್ತ್ರವನ್ನಅಧರಿಸಿ ಭವಿಷ್ಯ ಹೇಳುವ ಮೂಲಕ ರಾಜ್ಯದಲ್ಲಿ ಗುರುತಿಸಿಕೊಂಡಿದ್ದ ಆರ್ಯವರ್ಧನ್ ಗುರೂಜಿಯವರು ಬಿಗ್ ಬಾಸ್ ಮನೆಗೆ ತೆರಳಿದ್ದಾರೆ.
ಅಲ್ಲದೇ, ತಮ್ಮದೇ ಶೈಲಿಯಲ್ಲಿ ಹಾಗೂ ಹಲವು ಹಿರಿಯ ರಾಜಕಾರಣಿಗಳು ಮತ್ತು ಚಲನಚಿತ್ರರಂಗದ ನಟರ ಬಗ್ಗೆ ಮಿಮಿಕ್ರಿ ಮಾಡಿ ರಾಜ್ಯಾದ್ಯಂತೆ ಹೆಸರುವಾಸಿಯಾಗಿರುವ ಮಿಮಿಕ್ರಿ ದಯಾನಂದ್ ಅವರೂ ಬಿಗ್ ಬಾಸ್ ಮನೆಗೆ ತೆರಳಿದ್ದಾರೆ.
ಈಗಾಗಲೇ ಆ್ಯಂಕರ್ ಸೋಮಣ್ಣ ಮಾಚಿಮಾಡ, ಸೋಷಿಯಲ್ ಮೀಡಿಯಾ ಸೆನ್ಸೇಷನ್ ಆಗಿದ್ದ ಸೋನು ಶ್ರೀನಿವಾಸ್ ಗೌಡ, ಸಾನ್ವಿ ಅಯ್ಯರ್, ಭೂಮಿಕಾ ಬಸವರಾಜ್, ರೂಪೇಶ್ ಶೆಟ್ಟಿ, ಜಯಶ್ರೀ ಆರಾಧ್ಯ, ರಾಮಾಚಾರಿ, ನಾಗ ಕನ್ನಿಕೆ ಧಾರಾವಾಹಿ ಹಾಗೂ ಬಡ್ಡೀಸ್ ಸಿನೆಮಾದ ನಾಯಕ ನಟ ನಟ ಉದಯ ಸೂರ್ಯ ಬಿಗ್ ಬಾಸ್ ಮನೆಗೆ ಒಳಗಡೆ ಪ್ರವೇಶ ಪಡೆದಿದ್ದಾರೆ.
Voot ಒಟಿಟಿಯಲ್ಲಷ್ಟೇ ಬಿಗ್ಬಾಸ್ ಸೀಸನ್ ನೋಡಲು ಅವಕಾಶವಿದೆ. ಇವತ್ತು ಸಂಜೆ 7 ಗಂಟೆಯಿಂದ ನೇರ ಪ್ರಸಾರ ಆಗಲಿದೆ.
ADVERTISEMENT