ಕಿಚ್ಚ ಸುದೀಪ್ ನಿರೂಪಣೆಯ ಬಿಗ್ ಬಾಸ್ ಹೊಸ ಸೀಸನ್ಗಾಗಿ ಪ್ರೇಕ್ಷಕರು ಕಾಯುತ್ತಿದ್ದಾರೆ. ಬಿಗ್ ಬಾಸ್ ಯಾವಗ ಶುರುವಾದಗಲೆಲ್ಲ ದೊಡ್ಡ ಮಟ್ಟದ ಸೆನ್ಸೇಷನ್ ಕ್ರಿಯೇಟ್ ಮಾಡುತ್ತೆ ಅನ್ನೋದು ಪಕ್ಕ. ಬಿಗ್ ಬಾಸ್ ಸೀಸನ್ 9 ಗ್ರ್ಯಾಂಡ್ ಓಪನಿಂಗ್ ಆಗುವುದಕ್ಕೂ ಮುನ್ನವೇ ಹೊಸ ಚರ್ಚೆ ಹುಟ್ಟುಹಾಕಿದೆ. ಈ ಬಾರಿ ಯಾರೇಲ್ಲ ಬಿಗ್ ಬಾಸ್ ಮನೆಗೆ ಕಾಲಿಡಲಿದ್ದಾರೆ ಅನ್ನುವ ಕೂತುಹಲ ಜನರರಲ್ಲಿ ಹೆಚ್ಚಿಸಿದೆ.
ಕನ್ನಡ ಬಿಗ್ ಬಾಸ್ 9ನೇ ಸೀಸನ್ ಆರಂಭಕ್ಕೆ ಸಕಲ ಸಿದ್ಧತೆ ನಡೆಯುತ್ತಿದೆ. ಕಲರ್ಸ್ ಕನ್ನಡ ವಾಹಿನಿ ಬಿಸ್ನೆಸ್ ಹೆಡ್ ಪರಮೇಶ್ವರ ಗುಂಡ್ಕಲ್ ಅವರು ‘ಬಿಗ್ ಬಾಸ್’ ಮನೆ ನಿರ್ಮಾಣ ಕಾರ್ಯದ ಬಗ್ಗೆ ಅಪ್ಡೇಟ್ ಮಾಡಿ ಹೊಸ ಕೌತುಕ ಕ್ರೀಯೆಟ್ ಮಾಡಿದೆ.
ಬಿಗ್ ಬಾಸ್ ಕಾರ್ಯಕ್ರಮವು ಭಾರದ ದೇಶದ ಎಲ್ಲ ಭಾಷೆಯಲ್ಲೂ ಫುಲ್ ಫೇಮಸ್ ಆಗಿದೆ. ಕನ್ನಡದಲ್ಲಿಯು ಸಹ ಈವರೆಗೂ 8 ಸೀಸನ್ಗಳು ಯಶಸ್ವಿಯಾಗಿ ಮುಗಿಸಿವೇ ಅಲ್ಲದೆ ಈಗಾಗಲೇ ಬಿಗ್ ಬಾಸ್ ಸೀಸನ್ 9 ಪ್ರೋಮೋ ಶೂಟಿಂಗ್ ಕೂಡ ಮುಗಿದಿದೆ. ಈ ಬಾರಿ ಯಾರಿಗೆಲ್ಲ ಈ ಸಲ ದೊಡ್ಮನೆಗೆ ಹೆಜ್ಜೆ ಹಿಡಲಿದ್ದಾರೆ ಎಂಬುದು ವೀಕ್ಷಕರ ಮನದಲ್ಲಿ ಮನೆ ಮಾಡಿದೆ.
ಪ್ರತಿ ವರ್ಷವು ಸಿನಿಮಾ ಮತ್ತು ಸೀರಿಯಲ್ ಜಗತ್ತಿನ ಸೆಲೆಬ್ರಿಟಿಗಳಿಗೆ ಅವಕಾಶ ನೀಡಲಾಗುತ್ತದೆ. ಹಾಗೆ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಧಾರಾವಾಹಿ ಮತ್ತು ರಿಯಾಲಿಟಿ ಶೋಗಳಲ್ಲಿನ ಪ್ರತಿಭೆಗಳಿಗೆ ಈ ಸಲ ಕೂಡ ಚಾನ್ಸ್ ಸಿಗಲಿದೆ ಎನ್ನಲಾಗಿದೆ.
ಕಳೆದ ಸೀಸನ್ನಲ್ಲಿ ಸೆಲೆಬ್ರಿಟಿಗಳ ಜೊತೆ ಕೆಲವು ಯೂಟ್ಯೂಬ್ ಮೇಕರ್ಸ್ ಗಳಿಗು ಕೂಡ ಅವಕಾಶ ನಿಡಿದ್ದರು. ಈ ಬಾರಿ ಸಹ ಜನ ಸಾಮಾನ್ಯರಿಗು ಅವಕಾಶ ನೀಡಬೇಕು ಎಂದು ಕಮೆಂಟ್ಗಳ ಮೂಲಕ ನೆಟ್ಟಿಗರು ತಮ್ಮ ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ. ಇನ್ಸ್ಟಾಗ್ರಾಮ್, ಯೂಟ್ಯೂಬ್, ಫೇಸ್ಬುಕ್ನಲ್ಲಿ ಸಾಕಷ್ಟು ಖ್ಯಾತಿ ಗಳಿಸಿದವರಿಗೂ ಈ ಬಾರಿಯ ಬಿಗ್ ಬಾಸ್ನಲ್ಲಿ ಚಾನ್ಸ್ ಸಿಗಬಹುದು ಎಂಬ ನಿರೀಕ್ಷೆ ಇದೆ.
ಇನ್ನೂ ಕೆಲವೇ ದಿನಗಳಲ್ಲಿ ಬಿಗ್ ಬಾಸ್ ಸೀಸನ್ 9 ರ ಪ್ರೋಮೋ ಕಲರ್ಸ್ ಕನ್ನಡ ಬಿಡುಗಡೆ ಮಾಡಲಿದ್ದು ಅದಷ್ಟು ಬೇಗ ಕಿರುತರೆ ಮೇಲೆ ಬಿಬಿಕೆಯನ್ನು ವೀಕ್ಷಿಸಬಹುದು.