ನಿತ್ಯ ಬಳಕೆಯ ವಸ್ತುಗಳಲ್ಲಿ ಒಂದಾದ ಟೊಮೆಟೋ ದರಗಳಿಗೆ ರೆಕ್ಕೆ ಬಂದಿದೆ. ಮೊನ್ನೆ ಮೊನ್ನೆಯವರೆಗೆ ಕಿಲೋ ಟೊಮೆಟೋಗೆ 20ರಿಂದ 30 ರೂಪಾಯಿ ಇತ್ತು.ಇದೀಗ ಹಲವು ರಾಜ್ಯಗಳಲ್ಲಿ ಟೊಮೆಟೋ ಬೆಲೆ ಸೆಂಚುರಿ ಹೊಡೆದಿದೆ.
ಬಳ್ಳಾರಿಯಲ್ಲಿ ದೇಶದಲ್ಲೇ ಗರಿಷ್ಠ ರೇಟ್ ಬೆಂಗಳೂರಿನಲ್ಲಿ ನಿನ್ನೆ ಮೊನ್ನೆ 30 ರೂಪಾಯಿ ಇದ್ದ ಟೊಮೆಟೋ ರೇಟ್ ಈಗ ಸೆಂಚುರಿ ಬಾರಿಸಿದೆ. ಬಳ್ಳಾರಿಯಲ್ಲಿ ದೇಶದಲ್ಲಿಯೇ ಗರಿಷ್ಠ ಬೆಲೆ ಇದೆ. ಇಲ್ಲಿ ಕೆಜಿ ಟೊಮೆಟೋ ಬೆಲೆ 122 ರೂಪಾಯಿ ಆಗಿದೆ.
ಕಾನ್ಪುರಕ್ಕೆ ಟೊಮೆಟೋ ಬೆಂಗಳೂರಿನಿಂದ ಪೂರೈಕೆ ಆಗುತ್ತದೆ. ಮುಂದಿನ ದಿನಗಳಲ್ಲಿ ಕಿಲೋ ಟೊಮೆಟೋ ಬೆಲೆ 150ರೂಪಾಯಿವರೆಗೂ ಆಗಬಹುದು ಎಂದು ಅಲ್ಲಿನ ವ್ಯಾಪಾರಿಗಳು ಅಂದಾಜಿಸಿದ್ದಾರೆ.
ದೆಹಲಿಯಲ್ಲಿ ಕಿಲೋ ಟೊಮೆಟೋ ಬೆಲೆ 80 ರೂಪಾಯಿ ದಾಟಿದೆ. ಉತ್ತರಪ್ರದೇಶದ ಕಾನ್ಪುರದಲ್ಲಿ ಹೋಲ್‌ಸೇಲ್ ಮಾರುಕಟ್ಟೆಯಲ್ಲಿ ಕಿಲೋ ಟೊಮೆಟೋ ಬೆಲೆ 90 ರೂಪಾಯಿ ಇದೆ.
ಮುಂಬೈನ ರಿಟೇಲ್ ಮಾರ್ಕೆಟ್‌ನಲ್ಲಿ ಕಿಲೋ ಟೊಮೆಟೋ ಬೆಲೆ 100 ರೂಪಾಯಿ ದಾಟಿದೆ.
ಹೈದರಾಬಾದ್ ಸೇರಿ ತೆಲಂಗಾಣದಲ್ಲೂ ಕೆಜಿ ಟೊಮೆಟೋ ದರ 100 ರೂಪಾಯಿ ಆಗೋಗಿದೆ.
ದರ ಹೆಚ್ಚಳಕ್ಕೆ ಕಾರಣವೇನು?
ದೇಶದಲ್ಲಿ ಟೊಮೆಟೋ ಬೆಳೆಯನ್ನು ಕರ್ನಾಟಕ, ಆಂಧ್ರ ಪ್ರದೇಶ, ತಮಿಳುನಾಡು, ಒಡಿಶಾ, ಗುಜರಾತ್, ಮಧ್ಯಪ್ರದೇಶದಲ್ಲಿ ಹೆಚ್ಚಾಗಿ ಬೆಳೆಯಲಾಗುತ್ತದೆ.
ಈ ರಾಜ್ಯಗಳಲ್ಲಿಸದ್ಯಕ್ಕೆ ಪ್ರತೀಕೂಲ ಹವಾಮಾನವಿದೆ. ಮೊನ್ನೆ ಮೊನ್ನೆಯವರೆಗೂ ಬಿರುಬಿಸಿಲು, ಮಳೆ ಅಭಾವ ಕಂಡುಬಂದಿತ್ತು. ಇದೀಗ ಮುಂಗಾರು ಪ್ರವೇಶ ಮಾಡಿದ್ದರೂ, ಕೆಲವೆಡೆ ಅನಾವೃಷ್ಟಿಯಿದೆ. ಕೆಲವೆಡೆ ಅತೀವೃಷ್ಟಿಯಿದೆ. ಪರಿಣಾಮ ಟೊಮೆಟೋ ಬೆಳೆ ಹಾಳಾಗುತ್ತಿದೆ.
ಟೊಮೆಟೋ ಬೆಳೆಯನ್ನು ಹೆಚ್ಚಾಗಿ ಬೆಳೆಯುವ ಕರ್ನಾಟಕದ ಬೆಂಗಳೂರು ಗ್ರಾಮೀಣ, ಚಿತ್ರದುರ್ಗ, ಪಾವಗಡ, ಚಿಕ್ಕಬಳ್ಳಾಪುರ, ಕೋಲಾರ, ರಾಮನಗರದಲ್ಲಿ ಮಳೆ ಅಭಾವದಿಂದ ಹೆಚ್ಚು ಬೆಳೆ ಬಂದಿಲ್ಲ. ತೆಲಂಗಾಣದಲ್ಲೂ ಇದೆ ಪರಿಸ್ಥಿತಿ ಇದೆ.
ಕೋಲಾರ ಮಾರುಕಟ್ಟೆಯಲ್ಲಿ ರೇಟ್ ಏನು? ಕೋಲಾರದ ಟೊಮೆಟೋ ಮಾರುಕಟ್ಟೆಯಲ್ಲಿ 15 ಕೆಜಿಯ ಟೊಮೆಟೋ ಬಾಕ್ಸ್ 1200ರಿಂದ 1500 ರೂಪಾಯಿವರೆಗೂ ಬಿಕರಿ ಆಗುತ್ತಿದೆ. ಇದು ಮುಂದಿನ ದಿನಗಳಲ್ಲಿ ಇನ್ನಷ್ಟು ಹೆಚ್ಚಾಗಬಹುದು ಅಂತಾರೆ ಅಲ್ಲಿನ ವ್ಯಾಪಾರಿ.
ಹೊಸೂರು ಮಾರುಕಟ್ಟೆಯಲ್ಲಿ 15 ಕೆಜಿ ಬಾಕ್ಸ್ ಟೊಮೆಟೋ ರೇಟ್ 2,100 ರೂಪಾಯಿವರೆಗೂ ಇದೆ ಎನ್ನಲಾಗುತ್ತಿದೆ.
ಸರ್ಕಾರ ಏನು ಹೇಳುತ್ತದೆ..?
ಟೊಮೆಟೋ ಬೆಲೆ ಹೆಚ್ಚಳ ಕೇವಲ ತಾತ್ಕಾಲಿಕ ಮಾತ್ರ.. ಶೀಘ್ರವೇ ಟೊಮೆಟೋ ಬೆಲೆ ಇಳಿಕೆಯಾಗಲಿದೆ ಎಂದು ಕೇಂದ್ರ ಸರ್ಕಾರದ ಅಧಿಕಾರಿಯೊಬ್ಬರು ಅಭಿಪ್ರಾಯಪಟ್ಟಿದ್ದಾರೆ.
ಟೊಮೆಟೋ ಬೇಗ ಹಾಳಾಗುವ ಲಕ್ಷಣ ಉಳ್ಳ ತರಕಾರಿ. ದೇಶದಲ್ಲಿ ದಿಢೀರ್ ಮಳೆ, ಪ್ರವಾಹದ ಕಾರಣ ಪೂರೈಕೆಯಲ್ಲಿ ಒಂದಿಷ್ಟು ವ್ಯತ್ಯಯಗಳು ಉಂಟಾಗಿವೆ. ಇದು ತಾತ್ಕಾಲಿಕ ಸಮಸ್ಯೆ ಮಾತ್ರ. ಬೇಗ ದರ ಇಳಿಕೆ ಆಗುತ್ತದೆ. ಪ್ರತಿ ವರ್ಷವೂ ಹೀಗೆ ನಡೆಯುತ್ತದೆ
ಎಂದು ಗ್ರಾಹಕ ವ್ಯವಹಾರಗಳ ಸಚಿವಾಲಯದ ಕಾರ್ಯದರ್ಶಿ ರೋಹಿತ್ ಕುಮಾರ್ ಸಿನ್ಹಾ ತಿಳಿಸಿದ್ದಾರೆ.
ಗ್ರಾಹಕ ವ್ಯವಹಾರಗಳ ಸಚಿವಾಲಯದ ಪ್ರಕಾರ ದೇಶದಲ್ಲಿ ಸದ್ಯ ಕೆಜಿ ಟೊಮೆಟೋ ಸಗಟು ಬೆಲೆ 46 ರೂಪಾಯಿ ಇದೆ. ಗರಿಷ್ಠ ಬೆಲೆ 122 ರೂಪಾಯಿ ಇದೆ.
ADVERTISEMENT
ADVERTISEMENT