ಬಿಗ್ ನ್ಯೂಸ್.. ಎನ್‍ಪಿಆರ್ ಪ್ರಕಾರ ಎಸ್‍ಸಿ ಕೆಟಗರಿಗೆ ಬರೋದು ಯಾರು?

ನಿಮ್ದು ಸ್ವಂತ ಮನೆನಾ..? ಬಾಡಿಗೆ ಮನೆನಾ..? ಲೀಸ್‍ಗೆ ಇದ್ದೀರಾ..? ಫ್ಲೋರಿಂಗ್‍ಗೆ ಗ್ರಾನೈಟ್ ಬಳಸಿದ್ದೀರಾ..? ಮನೆಯಲ್ಲಿ ಎಷ್ಟು ರೂಂ ಇವೆ..? ಬಾತ್‍ರೂಂಗಳೆಷ್ಟು..? ಅಟ್ಯಾಚ್ಡ್ ಬಾತ್‍ರೂಂ ಇವೆಯಾ..? ಮನೆಯಲ್ಲಿ ಎಷ್ಟು ದಂಪತಿಗಳು ಇದ್ದಾರೆ.

ಇಂತಹ 34 ಪ್ರಶ್ನೆಗಳಿಗೆ ಪ್ರತಿ ಕುಟುಂಬದವರು ಉತ್ತರಿಸಲು ಸಿದ್ದರಾಗಿರಬೇಕು. 10 ವರ್ಷಗಳ ನಂತರ ಕೈಗೊಳ್ಳುತ್ತಿರುವ ರಾಷ್ಟ್ರೀಯ ಜನಸಂಖ್ಯಾ ನೋಂದಣಿ (ಎನ್‍ಪಿಆರ್)ಗಾಗಿ ಕೇಂದ್ರ ಜನಗಣತಿ ಸಚಿವಾಲಯ ಪ್ರಶ್ನಾವಳಿಯನ್ನು ಸಿದ್ದಪಡಿಸಿದೆ. 2020ರ ಏಪ್ರಿಲ್‍ನಿಂದ ಸೆಪ್ಟೆಂಬರ್ 30ರೊಳಗೆ ಎನ್‍ಪಿಆರ್ ಪರಿಷ್ಕರಣೆ ನಡೆಸಲಾಗುತ್ತದೆ.

 

ಎನ್‍ಪಿಆರ್ ಪರಿಷ್ಕರಣೆ ವೇಳೆ ವ್ಯಕ್ತಿಗತ ವಿವರಗಳನ್ನು ಸಂಗ್ರಹಿಸಲ್ಲ
ಅಂದ ಹಾಗೇ, ಎನ್‍ಪಿಆರ್ ಪರಿಷ್ಕರಣೆ ವೇಳೆ ವ್ಯಕ್ತಿಗತ ವಿವರಗಳನ್ನು ಸಂಗ್ರಹಿಸಲ್ಲ. ದೇಶದಲ್ಲಿ ನಿರ್ಮಿಸಲಾದ ಪ್ರತಿಯೊಂದು ಕಟ್ಟಡ, ಅದರಲ್ಲಿ ವಾಸವಿರುವ ಕುಟುಂಬಗಳ ವಿವರಗಳನ್ನು ಸಂಗ್ರಹಿಸಲಾಗುತ್ತದೆ. ಪ್ರತಿಯೊಂದು ಕುಟುಂಬ ಬಳಸುವ ಸೌಲಭ್ಯಗಳಲ್ಲಿನ ಸೂಕ್ಷ್ಮ ಅಂಶಗಳನ್ನು ಎನ್‍ಪಿಆರ್ ಪರಿಷ್ಕರಣೆಯಲ್ಲಿ ಪರಿಗಣಿಸಲಾಗುತ್ತದೆ. ಕುಟುಂಬ ಕಲ್ಯಾಣ ಯೋಜನೆಗಳು, ಅಭಿವೃದ್ಧಿ ಯೋಜನೆಗಳಿಗೆ ಅರ್ಹ ಫಲಾನುಭವಿಗಳನ್ನು ಗುರುತಿಸಲು ಎನ್‍ಪಿಆರ್ ಪರಿಷ್ಕರಣೆಯ ದತ್ತಾಂಶಗಳು ಸಹಾಯಕವಾಗಲಿವೆ. ಸರ್ಕಾರದ ವತಿಯಿಂದ ಪ್ರಜೆಗಳಿಗೆ ಯಾವ ರೀತಿಯ ಸೌಲಭ್ಯ ಕಲ್ಪಿಸಬೇಕು..? ಅದಕ್ಕೆ ಎಷ್ಟು ಅನುದಾನ ಅಗತ್ಯವಾಗುತ್ತದೆ ಎಂದು ಅಂದಾಜಿಸಲು ಈ ದತ್ತಾಂಶಗಳೇ ಆಧಾರ.

ಎಸ್‍ಸಿ ಕೆಟಗರಿಗೆ ಯಾವ ಧರ್ಮೀಯರು..?
ಎಸ್‍ಸಿ ಕೆಟಗರಿಗೆ ಹಿಂದೂ, ಸಿಖ್, ಬೌದ್ಧ ಧರ್ಮ ಅನುಸರಿಸುವವರನ್ನು ಮಾತ್ರ ಪರಿಗಣನೆಗೆ ತೆಗೆದುಕೊಳ್ಳಲಾಗುತ್ತದೆ. ಮುಸ್ಲಿಮ್, ಜೈನ ಧರ್ಮೀಯರನ್ನು ಎಸ್‍ಸಿ ಕೆಟಗರಿಗೆ ಎನ್‍ಪಿಆರ್ ಪರಿಷ್ಕರಣೆ ವೇಳೆ ಪರಿಗಣಿಸಲ್ಲ. ಆದ್ರೆ, ಎಸ್‍ಟಿ ಕೆಟಗರಿಗೆ ಎಲ್ಲಾ ಧರ್ಮೀಯರನ್ನು ಪರಿಗಣಿಸಲಾಗುತ್ತದೆ.

ಪ್ರತಿ ಕುಟುಂಬಕ್ಕೆ ಕೇಳುವ ಪ್ರಶ್ನೆಗಳು..

* ಮನೆಯಲ್ಲಿ ಎಷ್ಟು ದಂಪತಿಗಳು ಇದ್ದಾರೆ?
* ನೀವು ಬಾಡಿಗೆ ಮನೆಯಲ್ಲಿ ಇದ್ದೀರಾ..? ಬೇರೆ ಕಡೆ ನಿಮಗೆ ಸ್ವಂತ ಮನೆ ಇದೆಯಾ..?
* ಕುಡಿಯುವ ನೀರು ಮನೆಯಲ್ಲಾ ಬರುತ್ತಾ.? ಎಷ್ಟು ದೂರದಿಂದ ನೀರನ್ನು ತರುತ್ತೀರಿ..?
(ನಗರ ಪ್ರದೇಶದಲ್ಲಿ 100 ಮೀ., ಗ್ರಾಮೀಣ ಪ್ರದೇಶದಲ್ಲಿ 500 ಮೀ. ದೂರದಿಂದ ನೀರು ತಂದಲ್ಲಿ ಅದನ್ನು `ಹತ್ತಿರ’ ಎಂದು ಪರಿಗಣಿಸಲಾಗುತ್ತದೆ)
* ನಲ್ಲಿಯಲ್ಲಿ ನೀರು ಬರುತ್ತಾ..? ಬಾವಿಯಿಂದ, ಬೋರ್‍ವೆಲ್‍ನಿಂದ, ಕಾಲವೆಯಿಂದ ಕುಡಿಯುವ ನೀರು ತರುತ್ತೀರಾ..? ಬಾಟಲ್ ನೀರು ಬಳಸುತ್ತಿದ್ದೀರಾ..?
* ಮನೆಯನ್ನು ಯಾವ್ಯಾವ ಸಾಮಗ್ರಿ ಬಳಸಿ ನಿರ್ಮಿಸಲಾಗಿದೆ..?
(ಸೀಮೆಂಟ್, ಮಣ್ಣಿನ ಗೋಡೆ, ಗ್ರಾನೈಟ್… ಹೀಗೆ)
* ಒಳಚರಂಡಿಗೆ ಶೌಚಾಲಯದ ಸಂಪರ್ಕ ಕಲ್ಪಿಸಲಾಗಿದೆಯಾ..? ಅಥವಾ ಮನೆಯ ಆವರಣದಲ್ಲಿ ಸೆಪ್ಟಿಕ್ ಟ್ಯಾಂಕ್ ನಿರ್ಮಿಸಲಾಗಿದೆಯಾ..? ಇದನ್ನು ಸ್ವಚ್ಛಗೊಳಿಸಲು ಪೌರಕಾರ್ಮಿಕರನ್ನು ಬಳಕೆ ಮಾಡುತ್ತೀರಾ..?
* ಅಡುಗೆ ಮಾಡಲು ಎಲ್‍ಪಿಜಿ ಸಂಪರ್ಕ ಸಿಕ್ಕಿದೆಯಾ..? ಅಥ್ವಾ ಸೀಮೆ ಎಣ್ಣೆ, ಬೆರಣಿ, ಕರೆಂಟ್ ಸ್ವೌವ್, ಸೌರ ಓಲೆ ಬಳಸುತ್ತಿದ್ದೀರಾ..?
* ಲ್ಯಾಂಡ್‍ಲೈನ್ ಅಥ್ವಾ ಸೆಲ್‍ಫೋನ್ ಬಳಸುತ್ತಿದ್ದೀರಾ..? ಅಥವಾ ಎರಡನ್ನೂ ಬಳಸುತ್ತಿದ್ದೀರಾ..?
* ಸೈಕಲ್, ಬೈಕ್, ಕಾರ್ ಪೈಕಿ ಯಾವೆಲ್ಲಾ ನಿಮ್ಮಲ್ಲಿ ಇವೆ..?
* ಕುಟುಂಬದಲ್ಲಿ ಎಷ್ಟು ಮಂದಿಗೆ ಬ್ಯಾಂಕ್ ಖಾತೆಗಳಿವೆ..?
* ಮನೆಯ ಯಜಮಾನನ ಮೊಬೈಲ್ ಸಂಖ್ಯೆ ಏನು..?

LEAVE A REPLY

Please enter your comment!
Please enter your name here