BIG NEWS ರಾಜ್ಯದ ಪಾಲಿಗಿಂದು ಕರಾಳ ದಿನ.. ಒಂದೇ ದಿನ 63 ಪಾಸಿಟೀವ್ ಕೇಸ್

image courtesy: https://www.nature.com/

ಕರ್ನಾಟಕದ ಪಾಲಿಗೆ ಇಂದು ಕರಾಳ ಮಂಗಳವಾರವಾಗಿದ್ದು, ಇಂದು ಒಂದೇ ದಿನ ಬರೋಬ್ಬರಿ 63 ಕೊರೋನಾ ಪಾಸಿಟೀವ್ ಪ್ರಕರಣಗಳು ವರದಿಯಾಗಿವೆ. ಈ ಮೂಲಕ ರಾಜ್ಯದಲ್ಲಿ ಸೋಂಕಿತರ ಒಟ್ಟು ಸಂಖ್ಯೆ 925ಕ್ಕೆ ಏರಿಕೆಯಾಗಿದೆ.

ಆತಂಕದ ವಿಚಾರ ಅಂದರೆ, ಹಸಿರು ವಲಯದ ಜಿಲ್ಲೆಗಳಿಗೂ ಕೊರೋನಾ ವೈರಸ್ ವ್ಯಾಪಿಸಿದೆ. ಇಷ್ಟು ದಿನ ಹಸಿರು ವಲಯದಲ್ಲಿದ್ದ ಹಾಸನ, ಯಾದಗಿರಿ, ಕೋಲಾರದಂತ ಜಿಲ್ಲೆಗಳಲ್ಲಿಯೂ ಕೊರೋನಾ ಸೋಂಕು ಪ್ರಕರಣಗಳು ಬೆಳಕಿಗೆ ಬಂದಿವೆ. ಇದಕ್ಕೆ ಬೇರೆ ರಾಜ್ಯಗಳಿಂದ ಬಂದವರನ್ನು ಸೋಂಕು ಪರೀಕ್ಷೆ ನಡೆಸದೇ ಬಿಟ್ಟುಕೊಂಡಿದ್ದೇ ಪ್ರಮುಖ ಕಾರಣ ಆಗಿದೆ.

ಎಲ್ಲೆಲ್ಲಿ ಎಷ್ಟು ಕೊರೋನಾ ಕೇಸ್
ಬಾಗಲಕೋಟೆ – 15
ದಾವಣಗೆರೆ – 12
ಧಾರವಾಡ – 09
ಹಾಸನ – 5
ಬೆಂಗಳೂರು – 4
ಕೋಲಾರ – 5
ಗದಗ – 3
ಯಾದಗಿರಿ -2
ದಕ್ಷಿಣ ಕನ್ನಡ -2
ಕಲಬುರಗಿ- 1
ಮಂಡ್ಯ – 1
ಬಳ್ಳಾರಿ – 1
ಚಿಕ್ಕಬಳ್ಳಾಪುರ 1

LEAVE A REPLY

Please enter your comment!
Please enter your name here