Big Exclusive: ಕೆಜಿಎಫ್ ಚಿನ್ನದ ಗಣಿಯಲ್ಲಿ ಬಂಗಾರ ಮೀರಿದ ಲೋಹ.. ಮರುಕಳಿಸಲಿದ್ಯಾ ಗತವೈಭವ..?

ಕೋಲಾರದ ಕೆಜಿಎಫ್ ನಲ್ಲಿರುವ ಬಿಜಿಎಂಎಲ್ ಚಿನ್ನದ ಗಣಿಯಲ್ಲಿ ಬಂಗಾರವನ್ನು ಮೀರಿಸುವ ಲೋಹ ಪಲ್ಲಾಡಿಯಂ ನಿಕ್ಷೇಪಗಳು ಇದ್ದು, ಮುಂದಿನ ಸಂಸತ್ ಅಧಿವೇಶನದಲ್ಲಿ ಪಲ್ಲಾಡಿಯಂ ನಿಕ್ಷೇಪಗಳನ್ನು ಹೊರತೆಗೆಯುವ ಸಂಬಂಧ ಕೇಂದ್ರ ಸರ್ಕಾರ ತೀರ್ಮಾನ ಕೈಗೊಳ್ಳಲಿದೆ. ಈ ಮೂಲಕ ಕೋಲಾರ ಜನತೆಗೆ ಮೋದಿ ಸರ್ಕಾರ ಸಿಹಿ ಸುದ್ದಿ ನೀಡಲಿದೆ ಎಂದು ಸಂಸದ ಮುನಿಸ್ವಾಮಿ ತಿಳಿಸಿದ್ದಾರೆ.

ಬಿಜಿಎಂಎಲ್ ಪುನರುಜ್ಜೀವನಕ್ಕೆ ಸಂಬಂಧಿಸಿದಂತೆ ಗಣಿ ಕಾರ್ಮಿಕರ ನಿಯೋಗವನ್ನು ಪ್ರಧಾನಿ ಬಳಿಗೆ ಕರೆದೊಯ್ಯಲಾಗಿತ್ತು. ಈ ಸಂದರ್ಭದಲ್ಲಿ ಪ್ರಧಾನಿ, ಗಣಿ ಮಂತ್ರಿ ಪ್ರಹ್ಲಾದ್ ಜೋಷಿ ನೇತೃತ್ವದಲ್ಲಿ ಉನ್ನತ ಮಟ್ಟದ ಸಮಿತಿ ರಚಿಸಿದ್ದರು. ಈ ಸಮಿತಿ ಬಿಜಿಎಂಎಲ್ ಗೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಚಿನ್ನದ ನಿಕ್ಷೇಪಗಳ ಮಾದರಿಯನ್ನು ಪರೀಕ್ಷೆಗಾಗಿ ಪ್ರಯೋಗಾಲಯಕ್ಕೆ ಕಳಿಸಿತ್ತು. ಈ ಸಂದರ್ಭದಲ್ಲಿ ಪಲ್ಲಾಡಿಯಂ ನಿಕ್ಷೇಪ ಇರುವುದು ಬಯಲಾಗಿದೆ. ಖಾಸಗಿ ಸಹಭಾಗಿತ್ವದಲ್ಲಿ (ಪಿಪಿಪಿ) ಈ ಗಣಿಯನ್ನು ಆರಂಭಿಸುವ ಸಾಧ್ಯತೆ ಇದೆ ಎಂದು ಸಂಸದ ಮುನಿಸ್ವಾಮಿ ತಿಳಿಸಿದ್ದಾರೆ.

ಪಲ್ಲಾಡಿಯಂ ಎಂದರೇನು..?
* ಪಲ್ಲಾಡಿಯಂ.. ಪ್ಲಾಟಿನಂ ಗುಂಪು ಲೋಹದಲ್ಲಿ ಇದು ಒಂದು. ಸಿಲ್ವರ್ ಬಣ್ಣದಲ್ಲಿ ಇರುತ್ತದೆ.
* ಕಡಿಮೆ ಉಷ್ಣಾಗ್ರತೆಗೆ ಇದು ಕರಗುವ ಗುಣ ಹೊಂದಿರುತ್ತದೆ.
* ಜಗತ್ತಿನಲ್ಲಿ ಅತೀ ಕಡಿಮೆ ಪ್ರಮಾಣದಲ್ಲಿ ಇದು ಲಭ್ಯ ಆಗುತ್ತದೆ.
* ಕಾರ್ ಎಂಜಿನ್ ಬಿಡಿಭಾಗ, ಎಲೆಕ್ಟ್ರಾನಿಕ್ ಉಪಕರಣ, ಆಭರಣ ತಯಾರಿಯಲ್ಲಿ ಇದನ್ನು ಹೆಚ್ಚಾಗಿ ಬಳಸಲಾಗುತ್ತದೆ.
* ಸದ್ಯ ಇದನ್ನು ರಷ್ಯಾ, ದಕ್ಷಿಣ ಆಫ್ರಿಕಾ ದೇಶದಲ್ಲಿ ಉತ್ಪಾದನೆ ಮಾಡಲಾಗುತ್ತದೆ.
* ಆದರೆ ಬೇಡಿಕೆಗೆ ಅನುಗುಣವಾಗಿ ಪೂರೈಕೆ ಆಗುತ್ತಿಲ್ಲ
* ಪಲ್ಲಾಡಿಯಂ ಬೆಲೆ ಚಿನ್ನಕ್ಕಿಂತ ಜಾಸ್ತಿ, ಪ್ಲಾಟಿನಂಗಿಂತ ಕಡಿಮೆ ಇದೆ.

LEAVE A REPLY

Please enter your comment!
Please enter your name here