Big Breaking : ಯಡಿಯೂರಪ್ಪ ವಿರುದ್ಧದ ತನಿಖೆಗೆ ಸುಪ್ರೀಂಕೋರ್ಟ್ ತಡೆ

Yadiyurappa

ಯಡಿಯೂರಪ್ಪ (Yadiyurappa), ಪುತ್ರ ವಿಜಯೇಂದ್ರ ವಿರುದ್ಧದ ಲೋಕಾಯುಕ್ತ ತನಿಖೆಗೆ ಸುಪ್ರೀಂಕೋರ್ಟ್ ಇಂದು ತಡೆಯಾಜ್ಞೆ ನೀಡಿದೆ.

ಸೆ.16 ರಂದು ಲೋಕಾಯುಕ್ತ ಪೊಲೀಸರು ಯಡಿಯೂರಪ್ಪ, ಪುತ್ರ ವಿಜಯೇಂದ್ರ, ಸಚಿವ ಎಸ್​ಟಿ ಸೋಮಶೇಖರ್, ಯಡಿಯೂರಪ್ಪ ಮೊಮ್ಮಗ ಶಶಿಧರ್ ಮರಡಿ, ಅಳಿಯ ವಿರುಪಾಕ್ಷಪ್ಪ ಯಮಕನಮರಡಿ, ಚಂದ್ರಕಾಂತ್ ರಾಮಲಿಂಗಂ, ಡಾ.ಜೆ.ಸಿ ಪ್ರಕಾಶ್ ವಿರುದ್ಧ ಎಫ್​ಐಆರ್ ದಾಖಲಿಸಿತ್ತು.

ಬೆಂಗಳೂರಿನ ಜನಪ್ರತಿನಿಧಿಗಳ ನ್ಯಾಯಾಲಯದ ಸೂಚನೆಯ ಮೇರೆಗೆ ಲೋಕಾಯುಕ್ತದಲ್ಲಿ ಎಫ್​ಐಆರ್ ದಾಖಲಾಗಿತ್ತು. ಆದರೆ, ತನಿಖೆಗೆ ತಡೆ ಕೋರಿ ಯಡಿಯೂರಪ್ಪ ಮತ್ತು ಇತರರು ಸುಪ್ರೀಂಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದರು.

ಸಾಮಾಜಿಕ ಹೋರಾಟಗಾರ ಟಿಜೆ ಅಬ್ರಹಾಂ ದೂರು ಆಧರಿಸಿ ಬೆಂಗಳೂರಿನ ಕೋರ್ಟ್ ಎಫ್​ಐಆರ್ ದಾಖಲಿಸಲು ಲೋಕಾಯುಕ್ತಕ್ಕೆ ಸೂಚಿಸಿತ್ತು.

2017ರಲ್ಲಿ ಅನುಮೋದನೆಗೊಂಡಿದ್ದ ಬಿಡಿಎ ವಸತಿ ಸಮುಚ್ಚಯ ನಿರ್ಮಾಣದ ಕಾಮಗಾರಿಯ ಕಾರ್ಯಾದೇಶಕ್ಕಾಗಿ 2019ರಲ್ಲಿ ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪ (Yadiyurappa) ಮತ್ತು ಕುಟುಂಬಸ್ಥರಿಗೆ 12 ಕೋ.ರೂ. ಲಂಚ ನೀಡಲಾಗಿತ್ತು. ಮತ್ತು ರಾಮಲಿಂಗಂ ಕನ್​ಸ್ಟ್ರಕ್ಷನ್ ಕಂಪನಿ ಯಡಿಯೂರಪ್ಪ ಕುಟುಂಬಸ್ಥರ ನಕಲಿ ಕಂಪನಿಗಳಿಗೆ 5 ಕೋ.ರೂ ಹಣ ಸಂದಾಯ ಮಾಡಿತ್ತು ಎಂಬ ಆರೋಪದಡಿ ಎಫ್​ಐಆರ್ ದಾಖಲಾಗಿತ್ತು.

ಇದನ್ನೂ ಓದಿ : BIG BREAKING: ಯಡಿಯೂರಪ್ಪ, ಪುತ್ರ ವಿಜಯೇಂದ್ರ, ಸಚಿವ ಸೋಮಶೇಖರ್ ವಿರುದ್ಧ FIR ದಾಖಲು

LEAVE A REPLY

Please enter your comment!
Please enter your name here