BIG BREAKING: ಪೆಟ್ರೋಲ್‌-ಡೀಸೆಲ್‌ ಲೀಟರ್‌ಗೆ 13 ರೂಪಾಯಿ ದುಬಾರಿ

ಪೆಟ್ರೋಲ್‌ ಮತ್ತು ಡೀಸೆಲ್‌ ಮೇಲಿನ ತೆರಿಗೆಯನ್ನು ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಲೀಟರ್‌ಗೆ ಬರೋಬ್ಬರೀ 13 ರೂಪಾಯಿ ಜಾಸ್ತಿ ಮಾಡಿದೆ.

ಪೆಟ್ರೋಲ್‌ಗೆ ಲೀಟರ್‌ಗೆ 10 ರೂಪಾಯಿಯಷ್ಟು ದುಬಾರಿ ಆಗಿದ್ದು, ಡೀಸೆಲ್‌ 13 ರೂಪಾಯಿಯಷ್ಟು ದುಬಾರಿ ಆಗಿದೆ.

ಪೆಟ್ರೋಲ್‌ ಮತ್ತು ಡೀಸೆಲ್‌ ಮೇಲೆ 8 ರೂಪಾಯಿ ಮೂಲಸೌಕರ್ಯ ಅಭಿವೃದ್ಧಿ ಸೆಸ್‌ ವಿಧಿಸಲಾಗಿದೆ. ಜೊತೆಗೆ ಪ್ರತ್ಯೇಕವಾಗಿ ಪೆಟ್ರೋಲ್‌ ಮೇಲೆ 2 ರೂಪಾಯಿ ಹೆಚ್ಚುವರಿ ಅಬಕಾರಿ ಸುಂಕ ಮತ್ತು ಡೀಸೆಲ್‌ ಮೇಲೆ ಲೀಟರ್‌ಗೆ 5 ರೂಪಾಯಿ ಹೆಚ್ಚುವರಿ ಅಬಕಾರಿ ಸುಂಕ ವಿಧಿಸಲಾಗಿದೆ.

ಇವತ್ತು ಮಧ್ಯರಾತ್ರಿಯಿಂದಲೇ ಹೊಸ ದರ ಜಾರಿ ಆಗಲಿದೆ. ಲಾಕ್‌ಡೌನ್‌ ಹಿನ್ನೆಲೆಯಲ್ಲಿ ದೇಶದ ಆರ್ಥಿಕ ಸಂಕಷ್ಟದಲ್ಲಿರುವ ಬೆನ್ನಲ್ಲೇ ಪ್ರಧಾನಿ ಮೋದಿ ಸರ್ಕಾರ ಜನಸಾಮಾನ್ಯರಿಗೆ ಶಾಕ್‌ ನೀಡಿದೆ.

ಆದರೆ ಚಿಲ್ಲರೆ ಮಾರಾಟಕ್ಕೆ ಬೆಲೆ ಏರಿಕೆ ತಟ್ಟಲ್ಲ ಎಂದು ಮೋದಿ ಸರ್ಕಾರ ಸ್ಪಷ್ಟಪಡಿಸಿದೆ. ಜನಸಾಮಾನ್ಯರಿಗೆ ಹೊರೆ ಆಗಲ್ಲ ಎಂದಿದೆ.

ಇವತ್ತು ದೆಹಲಿಯ ಅರವಿಂದ್‌ ಕೇಜ್ರಿವಾಲ್‌ ಸರ್ಕಾರ ಕೂಡಾ ಪೆಟ್ರೋಲ್‌ಗೆ 1 ರೂಪಾಯಿ 67  ಮತ್ತು ಡೀಸೆಲ್‌ಗೆ 7 ರೂಪಾಯಿ 10 ಪೈಸೆ ಸೆಸ್‌ ಹೆಚ್ಚಳ ಮಾಡಿ ಆದೇಶ ಹೊರಡಿಸಿತ್ತು.

ಇವತ್ತು ಪಂಜಾಬ್‌ ಸರ್ಕಾರ ಕೂಡಾ ಪೆಟ್ರೋಲ್‌ ಮತ್ತು ಡೀಸೆಲ್‌ ಮೇಲೆ ಲೀಟರ್‌ಗೆ ತಲಾ 2 ರೂಪಾಯಿ ಸೆಸ್‌ ಹೆಚ್ಚಳ ಮಾಡಿತ್ತು.

ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಆರ್ಥಿಕ ಚಟುವಟಿಕೆ ಸ್ಥಗಿತಗೊಂಡಿರುವ ಕಾರಣ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಸಂಪನ್ಮೂಲ ಸಂಗ್ರಹಕ್ಕೆ ಕಚ್ಚಾತೈಲದ ಬೆನ್ನುಬಿದ್ದಿವೆ.

LEAVE A REPLY

Please enter your comment!
Please enter your name here