ಬಿಗ್ಬಾಸ್ ಸೀಸನ್ 9ಗೆ ದಿನಗಣನೆ ಶುರು ಆಗಿದೆ. ಈ ಬಾರಿ ದೊಡ್ಮನೆಗೆ ಹೋಗುವವರು ಯಾರು ಎಂಬ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ದೊಡ್ಡ ಚರ್ಚೆ ಶುರು ಆಗಿದೆ.
ಬಿಗ್ಬಾಸ್ನಲ್ಲಿ ಕಂಟೆಸ್ಟೆಂಟ್ ಆಗಬಹುದು ಎನ್ನಲಾಗಿರುವ ಸೋಷಿಯಲ್ ಮೀಡಿಯಾದಲ್ಲಿ ಹವಾ ಎಬ್ಬಿಸಿರುವ ಕೆಲವರ ಲಿಸ್ಟ್ ಫೈನಲ್ ಆಗಿದೆ ಎನ್ನಲಾಗ್ತಿದೆ.
ಲಾಯರ್ ಜಗದೀಶ್:
ವಕೀಲ್ ಸಾಬ್ ಎಂದೇ ಅಭಿಮಾನಿಗಳಿಂದ ಪ್ರೀತಿಯಿಂದ ಕರೆಸಿಕೊಳ್ಳುವ ಲಾಯರ್ ಜಗದೀಶ್ ಬಿಗ್ಬಾಸ್ ಶೋದಲ್ಲಿ ಸ್ಪರ್ಧಿ ಆಗಬಹುದು ಎನ್ನಲಾಗ್ತಿದೆ.
ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಕೇಸ್ ಮೂಲಕ ಜನರಿಗೆ ಚಿರಪರಿಚಿತರಾದ ಇವರು ಐಪಿಎಸ್ ಅಧಿಕಾರಿಯೊಬ್ಬರ ವಿರುದ್ಧವೂ ಹೋರಾಟದ ಮೂಲಕ ಸೋಷಿಯಲ್ ಮೀಡಿಯಾದಲ್ಲಿ ಸೆನ್ಸೇಷನ್ ಕ್ರಿಯೆಟ್ ಮಾಡಿದ್ದರು.
ಸಂಖ್ಯಾಶಾಸ್ತ್ರಜ್ಱ ಆರ್ಯವರ್ಧನ್:
ನಾನಂದ್ರೆ ನಂಬರ್, ನಂಬದ್ರೆ ನಾನು ಎನ್ನುವ ಡೈಲಾಗ್ ಹೊಡೆಯುವ ಆರ್ಯವರ್ಧನ್ ಕೂಡಾ ಈ ಬಾರಿ ಬಿಗ್ಬಾಸ್ ಶೋಗೆ ಹೋಗಲಿದ್ದಾರಂತೆ. ಐಪಿಎಲ್ ಟೈಂನಲ್ಲಿ ಇವರು ಪ್ರತಿದಿನ ಹೇಳ್ತಿದ್ದ ಟೀಂ ಭವಿಷ್ಯ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಟ್ರೋಲ್ ಆಗಿತ್ತು.
ಶಿವಪುತ್ರ ಯಶಾರಧ:
ವಿಜಯಪುರ ಮೂಲದ ಇವರು ತಮ್ಮ ಕಾಮಿಡಿ ಶೋ ಮೂಲಕ ಸಾಕಷ್ಟು ಫೇಮಸ್ ಆಗಿದ್ದಾರೆ. ಇವರ ಒಂದೊಂದು ಕಾಮಿಡಿ ಶೋ ಕೂಡಾ 10 ಲಕ್ಷಕ್ಕೂ ಹೆಚ್ಚು ವೀಕ್ಷಣೆ ಕಾಣುತ್ತೆ. ಕೋವಿಡ್ ಸಂದರ್ಭದಲ್ಲಿ ಅರಳಿದ ಅಪರೂಪದ ಪ್ರತಿಭೆಯಲ್ಲಿ ಇವರು ಕೂಡಾ ಒಬ್ಬರು.
ಮಲ್ಲು ಜಮಖಂಡಿ:
ಇವರು ಕೂಡಾ ತಮ್ಮದೇ ಕಾಮಿಡಿ ವೀಡಿಯೋಗಳ ಮೂಲಕ ಮನೆಮಾತಾದವರು. ಉತ್ತರ ಕರ್ನಾಟಕದಲ್ಲಿ ಸಾಕಷ್ಟು ಸದ್ದು ಮಾಡ್ತಿರುವ ಯೂಟ್ಯೂಬ್ ಆರ್ಟಿಸ್ಟ್ಗಳಲ್ಲಿ ಇವರು ಕೂಡಾ ಒಬ್ಬರು.
ADVERTISEMENT
ADVERTISEMENT