ಹಿರಿಯ ಸ್ವಾತಂತ್ರö್ಯ ಹೋರಾಟಗಾರ, ಗಾಂಧಿವಾದಿ ಭೋಜರಾಜ ಹೆಗ್ಡೆ ಪಡಂಗಡಿ ಇನ್ನಿಲ್ಲ. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಇವರು ಇವತ್ತು ನಿಧನರಾದರು. ಇವರಿಗೆ 98 ವರ್ಷ ವಯಸ್ಸಾಗಿತ್ತು.
ಇವರು ವಿನಯಪ್ರಸಾದ್ ಜೈನ್ ಮತ್ತು ವೀಣಾ ಪಿ ಜೈನ್ ಎಂಬ ಇಬ್ಬರು ಮಕ್ಕಳನ್ನು ಅಗಲಿದ್ದಾರೆ.
1937ರಲ್ಲೇ ಸ್ವಾತಂತ್ರö್ಯ ಹೋರಾಟಕ್ಕೆ ಧುಮುಕಿದ್ದ ಇವರು 1942ರಲ್ಲಿ ನಡೆದಿದ್ದ ಭಾರತ ಬಿಟ್ಟು ತೊಲಗಿ ಚಳುವಳಿಯಲ್ಲಿ ಭಾಗವಹಿಸಿದ್ದರು.
ಇದಾದ ಬಳಿಕ ಇಂದಿರಾಗಾAಧಿ ಸರ್ಕಾರ ಹೇರಿದ್ದ ತುರ್ತು ಪರಿಸ್ಥಿತಿಯನ್ನು ವಿರೋಧಿಸಿ ಹೋರಾಟಕ್ಕಿಳಿದಿದ್ದರು.
ಜೈನ ಸಮುದಾಯದ ಸಂಸ್ಥೆ ಮತ್ತು ಸಂಘಟನೆಗಳ ಜೊತೆಗೆ ರೋಟರಿ ಸಂಸ್ಥೆಯಲ್ಲೂ ಸಕ್ರಿಯರಾಗಿದ್ದರು.
ನಿಜಲಿಂಗಪ್ಪ ಸಿಎಂ ಆಗಿದ್ದ ವೇಳೆ ಇವರಿಗೆ 5 ಎಕರೆ ಭೂಮಿ ಮಂಜೂರು ಮಾಡುವುದಾಗಿ ಹೇಳಿದ್ದರು. ಆದರೆ ಸರ್ಕಾರದ ಭೂಮಿ ನನಗೆ ಬೇಡ ಎಂದು ಭೋಜರಾಜ ಹೆಗ್ಡೆ ಪಡಂಗಡಿ ಅವರು ನಯವಾಗಿ ತಿರಸ್ಕರಿಸಿದ್ದರು.
ಎರಡು ವರ್ಷಗಳ ಹಿಂದೆ ಬೆಳ್ತಂಗಡಿ ತಾಲೂಕಿನ ದಿಡುಪೆಯಲ್ಲಿ ಪ್ರವಾಹ ಸಂತ್ರಸ್ತರಿಗೆ ತಮ್ಮ ಉಳಿತಾಯದ 10 ಸಾವಿರ ರೂಪಾಯಿಯನ್ನು ನೆರವಾಗಿ ಸರ್ಕಾರಕ್ಕೆ ನೀಡಿದ್ದರು.