ರಾಜ್ಯ ಜೆಡಿಎಸ್ ನಾಯಕ ಹೆಚ್ಡಿ ಕುಮಾರಸ್ವಾಮಿಯವರು ತಮ್ಮ ಪತ್ನಿ ಅನಿತಾ ಕುಮಾರಸ್ವಾಮಿ ಮುಂದಿನ ಬಾರಿ ಚುನಾವಣೆಗೆ ನಿಲ್ಲಲ್ಲ ಎಂದು ಹೇಳಿದ ಕೆಲವೇ ದಿನಗಳಲ್ಲಿ; ಅವರ ಅಣ್ಣ ಹೆಚ್ಡಿ ರೇವಣ್ಣ ಅವರು ಮುಂದಿನ ಬಾರಿ ತಮ್ಮ ಪತ್ನಿ ಭವಾನಿಯವರು ಶಾಸಕಿ ಆಗೋದನ್ನ ಯಾರಿಂದಲೂ ತಡೆಯಲು ಸಾಧ್ಯವಿಲ್ಲ ಎಂದು ಹೇಳಿರುವುದು ಚರ್ಚೆಗೆ ಗ್ರಾಸವಾಗಿದೆ.
ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಹೆಚ್ಡಿ ರೇವಣ್ಣನವರು, ಹಾಸನದಲ್ಲಿ ಯಾರು ಸ್ಪರ್ಧಿಸಬೇಕೆಂದು ಪಕ್ಷ ತೀರ್ಮಾನಿಸುತ್ತೆ. MLCಗೂ ಭವಾನಿ ರೇವಣ್ಣರನ್ನ ನಿಲ್ಲಿಸುವಂತೆ ಒತ್ತಾಯಿಸಿದ್ದರು. ಭವಾನಿ ಯಾವತ್ತಾದರೂ ಒಂದು ದಿನ ಶಾಸಕಿಯಾಗುತ್ತಾರೆ. ಭವಾನಿ ಮೇಡಂ MLA ಆಗೋದನ್ನ ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಜೆಡಿಎಸ್ ಗೌಡರ ಕುಟುಂಬ ಪಕ್ಷ ಎಂಬ ಹಣೆಪಟ್ಟಿಯಿಂದ ಹೊರಗೆ ಬರಬೇಕು ಎನ್ನುವ ಕಾರಣದಿಂದ ಹೆಚ್ಡಿ ಕುಮಾರಸ್ವಾಮಿಯವರು ತಮ್ಮ ಪತ್ನಿ ಅನಿತಾ ಕುಮಾರಸ್ವಾಮಿಯವರನ್ನು ಮುಂದಿನ ಬಾರಿ ಚುನಾವಣೆಗೆ ನಿಲ್ಲಿಸಲ್ಲ ಎಂದಿದ್ದರು.
ಅಲ್ಲದೇ, ಶಾಸಕ ಪ್ರೀತಂ ಗೌಡ ಭವಾನಿಯವರಾದರೂ ಬರಲಿ ಮತ್ತಾರಾದರೂ ಬರಲಿ ತಮ್ಮನ್ನು ಹಾಸನ ಕ್ಷೇತ್ರದಿಂದ ಸೋಲಿಸೋಕೆ ಯಾರಿಂದಲೂ ಸಾಧ್ಯವಿಲ್ಲ ಎಂಬ ಎಂದು ಹೇಳಿದ್ದರು. ಇದೀಗ, ರೇವಣ್ಣ ಅವರ ತಮ್ಮ ಪತ್ನಿಯನ್ನು ಶಾಸಕಿಯನ್ನಾಗಿ ನೋಡುವ ಆಸೆಯಿದೆ ಎಂಬ ಹೇಳಿಕೆ ಇಬ್ಬರಿಗೂ ತಿರುಗೇಟು ನೀಡಿದಂತಿದೆ.