Rahul Gandhi: ಗುಜರಾತ್​ನಿಂದಲೇ 2ನೇ ಹಂತದ ಭಾರತ ಜೋಡೋ ಪಾದಯಾತ್ರೆ ಶುರು

ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ಅವರ ಭಾರತ ಜೋಡೋ ಪಾದಯಾತ್ರೆಯ ಎರಡನೇ ಭಾಗ ಗುಜರಾತ್​ನಿಂದ ಆರಂಭವಾಗಲಿದೆ.

ಗುಜರಾತ್​ನಿಂದ ಆರಂಭ ಆಗಲಿರುವ ಪಾದಯಾತ್ರೆ ಈಶಾನ್ಯ ರಾಜ್ಯ ಮೇಘಾಲಯದಲ್ಲಿ ಕೊನೆಯಾಗಲಿದೆ.

ಮಾಹಿತಿಗಳ ಪ್ರಕಾರ ಗುಜರಾತ್​ನ ಪೋರಬಂದರ್​ನಿಂದ ಪಾದಯಾತ್ರೆ ಶುರುವಾಗುವ ನಿರೀಕ್ಷೆ ಇದೆ.

ಕಳೆದ ವರ್ಷ ಸೆಪ್ಟೆಂಬರ್​​ 7ರಂದು ಕನ್ಯಾಕುಮಾರಿಯಿಂದ ಶುರುವಾಗಿದ್ದ ಪಾದಯಾತ್ರೆ ಜನವರಿ 30ರಂದು ಮಹಾತ್ಮ ಗಾಂಧಿ ಹುತಾತ್ಮರಾದ ದಿನ ಕಾಶ್ಮೀರದಲ್ಲಿ ಕೊನೆಯಾಗಿತ್ತು.

4 ಸಾವಿರದ 80 ಕಿಲೋ ಮೀಟರ್​ ನಡಿಗೆ ಮೂಲಕ ರಾಹುಲ್​ ಗಾಂಧಿ ಅವರು 12 ರಾಜ್ಯಗಳು ಮತ್ತು 2 ಕೇಂದ್ರಾಡಳಿತ ಪ್ರದೇಶಗಳಲ್ಲಿ ಸಂಚರಿಸಿದ್ದರು.

136 ಮೊದಲ ಹಂತದ ಪಾದಯಾತ್ರೆಯಲ್ಲಿ ತಮಿಳುನಾಡು, ಕೇರಳ, ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ, ಮಹಾರಾಷ್ಟ್ರ ದೆಹಲಿ, ಹರಿಯಾಣ, ಪಂಜಾಬ್​, ರಾಜಸ್ಥಾನ ರಾಜ್ಯಗಳಲ್ಲಿ ಪಾದಯಾತ್ರೆ ಕೈಗೊಂಡಿದ್ದರು.

LEAVE A REPLY

Please enter your comment!
Please enter your name here