ಪಾವಗಡದ ಪೊನ್ನಸಮುದ್ರದಲ್ಲಿ ತಪ್ಪಿದ ಭಾರೀ ಅನಾಹುತ ತಪ್ಪಿದೆ. ಗ್ರಾಮದ ಗೊಲ್ಲರಹಟ್ಟಿಯಲ್ಲಿ ಹಾದುಹೋಗಿರುವ 11KV ವೈರ್ ನ ಪ್ರೈಮರಿ ಲೈನ್ ತುಂಡಾಗಿ ಬಿದ್ದು ಸರ ಪಟಾಕಿಯಂತೆ ಸಿಡಿದಿದೆ.
ವಿದ್ಯುತ್ ಪ್ರವಹಿಸುತ್ತಿರುವ ವೈರ್ ಜನವಾಸತಿ, ಬಣವೆಗಳ ಬಳಿಯೇ ತುಂಡಾಗಿ ಬಿದ್ದಿದ್ದು, ವಿದ್ಯುತ್ ಹರಿವಿನ ತೀವ್ರತೆಗೆ ಭೂಮಿಯೇ ಕೊರೆದು ಹೋಗಿದೆ. ಅದೃಷ್ಟವಶಾತ್ ವಿದ್ಯುತ್ ತಂತಿ ತುಂಡಾಗಿ ಬಿದ್ದ ಸಂದರ್ಭದಲ್ಲಿ ಸ್ಥಳದಲ್ಲಿ ಯಾರು ಇರಲಿಲ್ಲ. ಜೊತೆಗೆ ಸಕಾಲಕ್ಕೆ ಸ್ಥಳೀಯರು ಗಮನಿಸಿದ ಕಾರಣ ಸಾವು ನೋವು ತಪ್ಪಿದೆ.
ಬೆಸ್ಕಾಂ ಎಸ್ಟಿಮೇಷನ್ ಹಾಕಿ ಕೊಟ್ಟಿದ್ದರೂ, ಮೆಟಿರಿಯಲ್ ಪೂರೈಕೆ ಮಾಡಲು ಗುತ್ತಿಗೆದಾರರು ಮೀನಾಮೇಷ ಎಣಿಸುತ್ತಿದ್ದಾರೆ. ಅದರ ಪರಿಣಾಮವೆ ಇದು ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಸಲುವಾಗಿ ಶಾಸಕ ವೆಂಕಟರಮಣಪ್ಪ ಬಳಿ ನಿಯೋಗ ಹೋಗಲು ಗ್ರಾಮಸ್ಥರು ನಿರ್ಧರಿಸಿದ್ದಾರೆ.