ಫೈಬರ್ನೆಟ್ ಉದ್ಯಮದಲ್ಲಿ ದ್ವೇಷದಿಂದಾಗಿ ಬೆಂಗಳೂರಲ್ಲಿ ನಡೆದಿದ್ದ ಖಾಸಗಿ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಫಣೀಂದ್ರ ಸುಬ್ರಹ್ಮಣ್ಯ ಮತ್ತು ಸಿಇಒ ವಿನು ಕುಮಾರ್ ಹತ್ಯೆ ಸಂಬಂಧ ಪೊಲೀಸರು ಮೂವರನ್ನು ಬಂಧಿಸಿದ್ದಾರೆ.
ಬಂಧಿತರನ್ನು ಶಬರೀಶ್ ಅಲಿಯಾಸ್ ಫ್ಲೆಕ್ಸ್ ಸಂತೋಷ್ ಮತ್ತು ವಿನಯ್ ರೆಡ್ಡಿ ಎಂದು ಗುರುತಿಸಲಾಗಿದೆ.
ಬೆಂಗಳೂರಿನ ಹೆಬ್ಬಾಳ-ಕೆಂಪಾಪುರದಲ್ಲಿ ಏರಾನಿಕ್ಸ್ ಮೀಡಿಯಾ ಪ್ರೈವೇಟ್ ಲಿಮಿಟೆಡ್ನನ್ನು ಫಣೀಂದ್ರ ಮತ್ತು ವಿನು ಕುಮಾರ್ ನವೆಂಬರ್ 2022ರಲ್ಲಿ ಸ್ಥಾಪನೆ ಮಾಡಿದ್ದರು.
ಇವರು ತಮ್ಮ ಕಂಪನಿಗೆ ಜಿನೆಟ್ ಎಂಬ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ 20 ಮಂದಿ ಇಂಜಿನಿಯರ್ ಮತ್ತು ಇತರೆ ಸಿಬ್ಬಂದಿಯನ್ನೇ ನೇಮಕ ಮಾಡಿಕೊಂಡಿದ್ದರು.
ಅಲ್ಲದೇ ಕೇವಲ 299 ರೂಪಾಯಿ 100mbps ವೇಗದ ಬ್ರಾಂಡ್ಬ್ಯಾಂಡ್ ಇಂಟರ್ನೆಟ್ ಸೌಲಭ್ಯ ನೀಡುತ್ತಿದ್ದರು.
ಒಂದು ಕಡೆ ತಮ್ಮದೇ ಕಂಪನಿಯ ಸಿಬ್ಬಂದಿಯನ್ನು ಸೆಳೆದಿದ್ದು ಮತ್ತು ತಮಗಿಂತ ಅತ್ಯಂತ ಕಡಿಮೆ ಬೆಲೆಯಲ್ಲಿ ಇಂಟರ್ನೆಟ್ ನೀಡುತ್ತಿದ್ದ ಕಾರಣ ತಮ್ಮ ಉದ್ಯಮಕ್ಕೆ ಹಿನ್ನಡೆ ಆಗಿದೆ ಎಂದು ಕುಪಿತಗೊಂಡು ಫಣೀಂದ್ರ ಮತ್ತು ವಿನು ಕುಮಾರ್ ಕೊಲೆ ಮಾಡಲಾಗಿದೆ.
ಬಂಧಿತ ಫ್ಲೆಕ್ಸ್ ಅಲಿಯಾಸ್ ಶಬರೀಶ್ ಈ ಹಿಂದೆ ಜಿನೆಟ್ನಲ್ಲಿ ಕೆಲಸ ಮಾಡುತ್ತಿದ್ದ.
ADVERTISEMENT
ADVERTISEMENT