ವಿಧಾನಸಭಾ ಚುನಾವಣೆ ಮುಗಿದ ಬೆನ್ನಲ್ಲೇ ಈಗ ಕರ್ನಾಟಕದಲ್ಲಿ ವಿಧಾನಸಭಾ ಚುನಾವಣಾ ಕಾವು ನಿಧಾನಕ್ಕೆ ಕಾವೇರುತ್ತಿದೆ.
ಮುಂದಿನ ವರ್ಷದ ಏಪ್ರಿಲ್-ಮೇ ವೇಳೆಗೆ ನಡೆಯಲಿರುವ ಲೋಕಸಭಾ ಕದನಕ್ಕೆ ಈಗಾಗಲೇ ಲೆಕ್ಕಾಚಾರ ಶುರುವಾಗಿದೆ.
ಇವೆಲ್ಲದರ ಮಧ್ಯೆ ಕರ್ನಾಟಕದಲ್ಲಿ ಕಾಂಗ್ರೆಸ್ ಪ್ರಚಂಡ ಬಹುಮತದಿಂದ ಗೆದ್ದರೂ ಉಪ ಮುಖ್ಯಮಂತ್ರಿ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರ ಸಹೋದರ ಬೆಂಗಳೂರು ಗ್ರಾಮಾಂತರ ಸಂಸದ ಡಿ ಕೆ ಸುರೇಶ್ ಈಗ ಚುನಾವಣಾ ವೈರಾಗ್ಯದ ಮಾತುಗಳನ್ನಾಡುತ್ತಿರುವುದು ವಿಶೇಷ ಎನಿಸಿದೆ.
ವಿಧಾನಸಭಾ ಚುನಾವಣಾ ಲೆಕ್ಕಾಚಾರ:
ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಎಂಟು ವಿಧಾನಸಭಾ ಕ್ಷೇತ್ರಗಳು ಬರುತ್ತವೆ. ಇದರಲ್ಲಿ ತುಮಕೂರು ಜಿಲ್ಲೆಗೆ ಒಳಪಡುವ ಕುಣಿಗಲ್, ಬೆಂಗಳೂರು ನಗರ ಜಿಲ್ಲೆಯ ವ್ಯಾಪ್ತಿಗೆ ಬರುವ ಆನೇಕಲ್, ಬೆಂಗಳೂರು ದಕ್ಷಿಣ ಮತ್ತು ರಾಜರಾಜೇಶ್ವರಿ ನಗರ ಹಾಗೂ ರಾಮನಗರ ಜಿಲ್ಲೆಯಲ್ಲಿ ಬರುವ ರಾಮನಗರ, ಮಾಗಡಿ, ಕನಕಪುರ ಮತ್ತು ಚನ್ನಪಟ್ಟಣ ವಿಧಾನಸಭಾ ಕ್ಷೇತ್ರಗಳು ಸೇರಿವೆ.
ಮೂರು ಬಾರಿ ಸಂಸದ ಡಿ ಕೆ ಸುರೇಶ್:
2013ರಲ್ಲಿ ಉಪ ಚುನಾವಣೆಯಲ್ಲಿ ಗೆದ್ದು ಮೊದಲ ಬಾರಿಗೆ ಸಂಸದರಾದ ಡಿ ಕೆ ಸುರೇಶ್ ಅವರು 2014, 2019ರಲ್ಲೂ ಗೆದ್ದು ಸಂಸದರಾದರು. 2019ರಲ್ಲಿ ಕಾಂಗ್ರೆಸ್ನಿಂದ ಗೆದ್ದಿದ್ದ ಏಕೈಕ ಸಂಸದ ಡಿ ಕೆ ಸುರೇಶ್.
2019 |
||
ಪಕ್ಷ |
ಅಭ್ಯರ್ಥಿ |
ಮತಗಳು |
ಕಾಂಗ್ರೆಸ್ |
ಡಿ ಕೆ ಸುರೇಶ್ |
8,78,258 |
ಬಿಜೆಪಿ |
ಅಶ್ವತ್ಥ್ ನಾರಾಯಣ |
6,71,388 |
ಬಿಎಸ್ಪಿ |
ಡಾ ಚಿನ್ನಪ್ಪ |
19,972 |
ನೋಟಾ |
ನೋಟಾ |
12,454 |
ಗೆಲುವಿನ ಅಂತರ |
2,06,870 |
|
2014 |
||
ಪಕ್ಷ |
ಅಭ್ಯರ್ಥಿ |
ಮತಗಳು |
ಕಾಂಗ್ರೆಸ್ |
ಡಿ ಕೆ ಸುರೇಶ್ |
6,52,723 |
ಬಿಜೆಪಿ |
ಮುನಿರಾಜು ಗೌಡ ಪಿ |
4,21,243 |
ಜೆಡಿಎಸ್ |
ಆರ್ ಪ್ರಭಾಕರ್ ರೆಡ್ಡಿ |
3,17,870 |
ಬಿಎಸ್ಪಿ |
ಸಿ ತೋಪಯ್ಯ |
11,594 |
ಗೆಲುವಿನ ಅಂತರ |
2,31,480 |
ಈ ವರ್ಷದ ವಿಧಾನಸಭಾ ಚುನಾವಣೆಯಲ್ಲಿ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ 8 ಕ್ಷೇತ್ರಗಳಲ್ಲಿ ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಪಡೆದಿರುವ ಒಟ್ಟು ಮತಗಳೆಷ್ಟು..? ಎಂಬ ಲೆಕ್ಕಾಚಾರ ಇಲ್ಲಿದೆ.
ಕ್ಷೇತ್ರ |
ಕಾಂಗ್ರೆಸ್ |
ಜೆಡಿಎಸ್ |
ಬಿಜೆಪಿ |
ಕುಣಿಗಲ್ |
58,697 |
53,097 |
44,476 |
ಆರ್ ಆರ್ ನಗರ |
67,877 |
10,269 |
1,25,990 |
ಬೆ. ದಕ್ಷಿಣ |
1,46,521 |
24,612 |
1,96,220 |
ಆನೇಕಲ್ |
1,34,797 |
6,415 |
1,03,472 |
ಮಾಗಡಿ |
94,650 |
82,811 |
20,197 |
ರಾಮನಗರ |
87,690 |
76,975 |
12,912 |
ಕನಕಪುರ |
1,43,023 |
20,631 |
19,753 |
ಚನ್ನಪಟ್ಟಣ |
1,53,374 |
96,592 |
80,671 |
ಒಟ್ಟು |
8,86,629 |
3,71,042 |
6,03,691 |
2019ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಮಾಡಿಕೊಂಡಿದ್ದರಿಂದ ಜೆಡಿಎಸ್ನ ಮತಗಳು ವಿಭಜನೆಯಾಗಿ ಬಿಜೆಪಿಗೂ ಹೋಗಿದ್ದವು.
ಸದ್ಯಕ್ಕೆ ವಿಧಾನಸಭಾ ಕ್ಷೇತ್ರವಾರು ಮೂರು ಪಕ್ಷಗಳು ಪಡೆದಿರುವ ಮತಗಳನ್ನು ಗಮನಿಸಿದರೆ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಸಹೋದರನಿಗೆ ಸೋಲಿಗೆ ಕಾರಣವಾದರೂ ಅಚ್ಚರಿಯೇನಿಲ್ಲ.
ADVERTISEMENT
ADVERTISEMENT