ಬೆಂಗಳೂರಿಗರೇ, ಪೊಲೀಸರಿಗೆ ದೂರು ಕೊಡಲು ಇನ್ಮುಂದೆ WhatsApp ಮಾಡಿ..!

ಬೆಂಗಳೂರಿಗರೇ ಇನ್ಮುಂದೆ ಪೊಲೀಸರಿಗೆ ದೂರು ನೀಡ್ಬೇಕು ಅಂದ್ರೆ 112ಗೆ ಕರೆ ಮಾಡ್ಬೇಕಿಲ್ಲ. ನಿಮ್ಮ ದೂರುಗಳನ್ನು ವಾಟ್ಸಾಪ್​ ಮಾಡಿದರೆ ಸಾಕು.

ಹೌದು ಬೆಂಗಳೂರು ನಗರ ಪೊಲೀಸ್​ ಆಯಕ್ತ ಬಿ ದಯಾನಂದ್​ ಅವರು ಮಹಾನಗರಿಯಲ್ಲಿ ಇಂಥದ್ದೊಂದು ವ್ಯವಸ್ಥೆಯನ್ನು ಘೋಷಿಸಿದ್ದಾರೆ.

94808 01000 ನಂಬರ್​ಗೆ ವಾಟ್ಸಾಪ್​ ಮಾಡುವ ಮೂಲಕ ದೂರು ನೀಡಬಹುದು. ಅಹಿತಕರ ಅಥವಾ ಕಾನೂನುಬಾಹಿರ ಘಟನೆಗಳು ನಡೆಯುತ್ತಿವೆ ಎಂದಾದಲ್ಲಿ ಆ ಕುರಿತ ಎಲ್ಲ ರೀತಿಯ ಮಾಹಿತಿಯನ್ನು ವಾಟ್ಸಾಪ್​ ಮಾಡುವ ಮೂಲಕ ಮಾತಾಡಬಹುದು.

ನಗರ ಪೊಲೀಸ್​ ಆಯುಕ್ತರಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಜೂನ್​ 11ರಂದು ದಯಾನಂದ್​ ಅವರು ನಗರದ ಎಸಿಪಿ, ಡಿಸಿಪಿ ಮತ್ತು ಹೆಚ್ಚುವರಿ ಪೊಲೀಸ್​ ಆಯುಕ್ತರ ಜೊತೆಗೆ 112 ನಂಬರ್​ ಯಾವ ರೀತಿ ಕೆಲಸ ಮಾಡುತ್ತಿದೆ ಎಂದು ತಿಳಿಯಲು ಹೊಯ್ಸಳ ವಾಹನದಲ್ಲಿ ನಗರದಲ್ಲಿ ಸುತ್ತಾಡಿದ್ದರು. 

ಆ ನಗರ ಸುತ್ತಾಟ ವೇಳೆ ಸಿಕ್ಕ ಅನುಭವ ಮತ್ತು ಮಾಹಿತಿ ಆಧರಿಸಿ ಬೆಂಗಳೂರು ನಗರದಲ್ಲಿ ಹೊಸ ಪ್ರಯೋಗಕ್ಕೆ ಆಯುಕ್ತರು ಹೆಜ್ಜೆ ಇಟ್ಟಿದ್ದಾರೆ.