ಬೆಂಗಳೂರಿಗರೇ ಎಚ್ಚರ – ಬೆಂಗಳೂರಲ್ಲಿ ಟ್ರಾಫಿಕ್ ಪೊಲೀಸರಿಂದ ಹೊಸ ನಿಯಮ

Bengaluru Underpass
Bengaluru Underpass

ಬೆಂಗಳೂರಿನ ವಾಹನ ಸವಾರರೇ ಎಚ್ಚರ. ಬೆಂಗಳೂರಲ್ಲಿ ಸಂಚಾರಿ ಪೊಲೀಸರು (Bengaluru Traffic Police) ಹೊಸ ನಿಯಮ ಜಾರಿಗೆ ತಂದಿದ್ದಾರೆ.

ನಗರದ ಅಂಡರ್‌ಪಾಸ್‌ಗಳಲ್ಲಿ (Underpass) ಇನ್ಮುಂದೆ ವಾಹನಗಳನ್ನು ನಿಲ್ಲಿಸುವಂತಿಲ್ಲ.

ವಾಹನ ನಿಲ್ಲಿಸಿದರೆ ಮೊದಲ ಬಾರಿಗೆ ತಪ್ಪಿಗೆ 500 ರೂಪಾಯಿ ದಂಡ ವಿಧಿಸಲಾಗುತ್ತದೆ.

ಎರಡನೇ ಬಾರಿಯೂ ಇದೇ ತಪ್ಪು ಕಂಡು ಬಂದಲ್ಲಿ 1 ಸಾವಿರ ರೂಪಾಯಿ ದಂಡ ವಿಧಿಸಲಾಗುತ್ತದೆ.

ಮಳೆ ಬಂದರೂ ಅಂಡರ್‌ಪಾಸ್‌ನಲ್ಲಿ ವಾಹನಗಳನ್ನು ನಿಲ್ಲಸಿ ರಕ್ಷಣೆ ಪಡೆಯುವಂತಿಲ್ಲ.

ಅಂಡರ್‌ಪಾಸ್‌ನಲ್ಲಿ ವಾಹನ ನಿಲ್ಲಿಸುವುದರಿಂದ ಅಪಘಾತ ಹೆಚ್ಚಾಗುತ್ತದೆ. ಹೀಗಾಗಿ ಮಳೆ ವೇಳೆ ಹತ್ತಿರದ ಅಂಗಡಿಗಳಲ್ಲಿ ವಾಹನ ನಿಲ್ಲಿಸಿ ರಕ್ಷಣೆ ಪಡೆದುಕೊಳ್ಳಿ ಎನ್ನುವುದು ಜಂಟಿ ಸಂಚಾರಿ ಪೊಲೀಸ್ ಆಯುಕ್ತ ರವಿಕಾಂತೇಗೌಡ ಅವರ ಸಲಹೆ.

LEAVE A REPLY

Please enter your comment!
Please enter your name here