ADVERTISEMENT
ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ (Bengaluru-Mysuru Expressway) ಸಂಚಾರ ನಿಯಮಗಳ ಉಲ್ಲಂಘನೆ ಹಿನ್ನೆಲೆಯಲ್ಲಿ ಎರಡು ದಿನದಲ್ಲಿ 490 ಪ್ರಕರಣಗಳನ್ನು (Traffic Cases) ದಾಖಲಿಸಲಾಗಿದೆ.
ಅತೀ ವೇಗಕ್ಕೆ (Over Speeding) ಸಂಬಂಧಿಸಿದಂತೆ 174 ಪ್ರಕರಣಗಳನ್ನು ದಾಖಲಿಸಲಾಗಿದೆ. ಲೇನ್ ಉಲ್ಲಂಘಿಸಿ (Lane Discipline ) ವಾಹನಗಳನ್ನು ಓಡಿಸಿದ ಹಿನ್ನೆಲೆಯಲ್ಲಿ 137 ಪ್ರಕರಣಗಳನ್ನು ದಾಖಲಿಸಲಾಗಿದೆ.
ಹೆಲ್ಮೆಟ್ ಇಲ್ಲದೇ ಸಂಚರಿಸಿದ ಬೈಕ್ ಸವಾರರ ವಿರುದ್ಧ 47 ಪ್ರಕರಣ ದಾಖಲಿಸಲಾಗಿದೆ. ಸೀಟ್ ಬೆಲ್ಟ್ ಧರಿಸಿದೇ ಪ್ರಯಾಣಿಸಿದ ಆರೋಪದಡಿ 81 ಮತ್ತು ಇತರೆ ನಿಯಮಗಳ ಉಲ್ಲಂಘನೆ ಆರೋಪದಡಿ 51 ಪ್ರಕರಣಗಳನ್ನು ದಾಖಲಿಸಲಾಗಿದೆ.
ಎಕ್ಸ್ಪ್ರೆಸ್ ವೇನಲ್ಲಿ ಅಪಘಾತ ಹೆಚ್ಚಿದ ಹಿನ್ನೆಲೆಯಲ್ಲಿ ಅತೀ ವೇಗ ನಿಯಂತ್ರಣಕ್ಕಾಗಿ ವಿಶೇಷ ಕಾರ್ಯಾಚರಣೆ ಪ್ರತಿದಿನವೂ ಮುಂದುವರೆಯುತ್ತದೆ ಎಂದು ರಾಮನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಾರ್ತಿಕ್ ರೆಡ್ಡಿ ಅವರು ಹೇಳಿದ್ದಾರೆ.
ADVERTISEMENT