ಬೆಂಗಳೂರು-ಮೈಸೂರು ಎಕ್ಸ್​ಪ್ರೆಸ್​ವೇ: 2ನೇ ಟೋಲ್​ ಸಂಗ್ರಹ ಶುರು – ಏಕಮುಖ ಸಂಚಾರಕ್ಕೆ 320 ರೂ. ಟೋಲ್​..!

ಬೆಂಗಳೂರು-ಮೈಸೂರು ಎಕ್ಸ್​​ಪ್ರೆಸ್​​ ವೇನಲ್ಲಿ ಜುಲೈ 1ರಿಂದ ಎರಡನೇ ಹಂತದ ಟೋಲ್​ ಸಂಗ್ರಹ ಆರಂಭವಾಗಲಿದೆ.

ಶ್ರೀರಂಗಪಟ್ಟಣದ ಗಣಂಗೂರು ಟೋಲ್​ನಲ್ಲಿ ಟೋಲ್​ ಸಂಗ್ರಹ ಆರಂಭವಾಲಿದ್ದು, ಅದು ಮೈಸೂರು ಪ್ರವೇಶಿಸುವ ಮಣಿಪಾಲ್​ ಆಸ್ಪತ್ರೆವರೆಗೆ ಇರುವ ಎಕ್ಸ್​ಪ್ರೆಸ್​ ವೇವರೆಗೆ ಅನ್ವಯವಾಗಲಿದೆ.

ಟೋಲ್​ ಶುಲ್ಕ:

ಕಾರು, ಜೀಪ್​, ವ್ಯಾನ್​: 155 ರೂ.

ಲಘ ವಾಹನ, ಸರಕು ಸಾಗಾಣಿಕೆ ವಾಹನ, ಮಿನಿಬಸ್​: 250 ರೂ.

ಮೂರು ಎಕ್ಸೆಲ್​ ವಾಣಿಜ್ಯ ವಾಹನ: 575 ರೂ.

ಟ್ರಕ್​, ಬಸ್​: 525 ರೂ.

ಭಾರೀ ವಾಹನಗಳು: 825 ರೂ.

7ಕ್ಕಿಂತ ಹೆಚ್ಚು ಎಕ್ಸೆಲ್​ ವಾಹನಗಳು: 1,005 ರೂ.

ಈಗಾಗಲೇ ಬೆಂಗಳೂರಿನಿಂದ ಮದ್ದೂರು ತಾಲೂಕಿನ ನಿಡಘಟ್ಟದವರೆಗೆ ಟೋಲ್​ ಸಂಗ್ರಹವಾಗುತ್ತಿದೆ. 

ಎರಡನೇ ಹಂತದ ಟೋಲ್​ ಸಂಗ್ರಹದಿಂದಾಗಿ ಬೆಂಗಳೂರಿನಿಂದ ಮೈಸೂರಿಗೆ ಹೋಗುವವರು ಏಕಮುಖ ಸಂಚಾರಕ್ಕೆ ಮೊದಲ ಹಂತದಲ್ಲಿ 165 ರೂಪಾಯಿ ಮತ್ತು ಎರಡನೇ ಹಂತದಲ್ಲಿ 155 ರೂಪಾಯಿ ಅಂದರೆ ಒಟ್ಟು 320 ರೂಪಾಯಿಯನ್ನು ಪಾವತಿಸಬೇಕಾಗುತ್ತದೆ.

ಎಕ್ಸ್​ಪ್ರೆಸ್​ವೇನಲ್ಲಿ ಕಾಮಗಾರಿ ಪೂರ್ಣಗೊಂಡಿಲ್ಲ, ಆದರೂ ಎರಡನೇ ಹಂತದಲ್ಲಿ ಟೋಲ್​ ಸಂಗ್ರಹವಾಗುತ್ತಿದೆ.

ಎರಡನೇ ಹಂತದಲ್ಲಿ ಈಗಾಗಲೇ ಟೋಲ್​ ಸಂಗ್ರಹ ಆರಂಭ ಆಗ್ಬೇಕಿತ್ತು ಎಂದು ಮೈಸೂರು ಸಂಸದ ಪ್ರತಾಪ್​ ಸಿಂಹ ಟೋಲ್​ ಸಂಗ್ರಹವನ್ನು ಸಮರ್ಥಿಸಿಕೊಂಡಿದ್ದಾರೆ.