Sep 1: ಬೆಂಗಳೂರು-ಮಂಗಳೂರು, ಮಂಗಳೂರು-ಬೆಂಗಳೂರು ನಡುವೆ 6 ದಿನ ರೈಲು – ಆದ್ರೆ ಈ 1 ದಿನ ಇರಲ್ಲ

Train

ಬೆಂಗಳೂರು – ಮಂಗಳೂರು (Bengaluru-Mangaluru) ನಡುವೆ ವಾರದಲ್ಲಿ ಮೂರು ದಿನವಷ್ಟೇ ಸಂಚರಿಸುತ್ತಿದ್ದ ರೈಲು ಈಗ ವಾರದಲ್ಲಿ ಆರು ದಿನ ಸಂಚರಿಸಲಿದೆ.

ಸೆಪ್ಟೆಂಬರ್​ 1ರಿಂದಲೇ ವಾರದಲ್ಲಿ 6 ದಿನಗಳ ಓಡಾಟ ಶುರುವಾಗಲಿದೆ.

ಇದನ್ನೂ ಓದಿ: 

ಬೆಂಗಳೂರಿನಿಂದ ಮಂಗಳೂರಿಗೆ ಹೋಗುವ ರೈಲು (ರೈಲು ಸಂಖ್ಯೆ 16585) ಶನಿವಾರ ಬಿಟ್ಟು ವಾರದ ಉಳಿದ ದಿನಗಳಲ್ಲಿ ಸಂಚರಿಸಲಿದೆ. ಮಂಗಳೂರಿನಿಂದ ಬೆಂಗಳೂರಿಗೆ ಹೊರಡುವ ರೈಲು (ರೈಲು ಸಂಖ್ಯೆ 16586) ಶುಕ್ರವಾರ ಬಿಟ್ಟು ವಾರದ ಉಳಿದ ದಿನ ಸಂಚರಿಸಲಿದೆ.

ಬೆಂಗಳೂರಿನಿಂದ ಹೊರಡುವ ರೈಲು ಕೆಎಸ್​ಆರ್​ ಬೆಂಗಳೂರು ಬದಲು ಬೈಯಪ್ಪನಹಳ್ಳಿಯ ಸರ್​ ಎಂ ವಿಶ್ವೇಶ್ವರಯ್ಯ ಟರ್ಮಿನಲ್​ನಿಂದ ರಾತ್ರಿ 8.15 ಗಂಟೆಯಿಂದ ಹೊರಟು ಬೆಂಗಳೂರು ಕಂಟ್ಮೋನ್ಮೆಂಟ್​, ಕೆಎಸ್​ಆರ್​ ಬೆಂಗಳೂರು, ಕೆಂಗೇರಿ, ಮೈಸೂರು, ಹೊಳೆನರಸೀಪುರ, ಹಾಸನ ಮೂಲಕ ಮಂಗಳೂರು ತಲುಪಲಿದೆ.

ಮಂಗಳೂರಿನಿಂದ ಬೆಂಗಳೂರಿಗೆ ರೈಲು ಬೆಳಗ್ಗೆ 6.15ಕ್ಕೆ ಹೊರಡಲಿದೆ.

LEAVE A REPLY

Please enter your comment!
Please enter your name here