ಬೆಂಗಳೂರು-ಮಂಗಳೂರು ನಡುವೆ ವಾರದಲ್ಲಿ 6 ದಿನ ರೈಲು

Train

ವಾರದಲ್ಲಿ ಮೂರು ಬಾರಿಯಷ್ಟೇ ಬೆಂಗಳೂರು-ಮಂಗಳೂರು (Bengaluru – Mangaluru) ನಡುವೆ ಸಂಚರಿಸುತ್ತಿದ್ದ ವಿಶೇಷ ರೈಲು (Special Train) ಇನ್ನು ಮುಂದೆ ವಾರದಲ್ಲಿ ಆರು ದಿನ ಸಂಚರಿಸಲಿದೆ.

ಅಂದರೆ ವಾರದಲ್ಲಿ ಒಂದು ದಿನ ಬಿಟ್ಟು ಉಳಿದ ಆರು ದಿನ ವಿಶೇಷ ರೈಲು ಮಂಗಳೂರು-ಬೆಂಗಳೂರು, ಬೆಂಗಳೂರು-ಮಂಗಳೂರು ನಡುವೆ ಸಂಚರಿಸಲಿದೆ.

ಇದನ್ನೂ ಓದಿ: ಚಿರು ಸರ್ಜಾ, ಪುನೀತ್​, ಸೋನಾಲಿ ಪೊಗಾಟ್ – ಭಾರತೀಯ ಯುವಕರಲ್ಲೇಕೆ​​ ಹೃದಯಾಘಾತ ಹೆಚ್ಚು

06547/548 ಸಂಖ್ಯೆಯ ರೈಲನ್ನು ವಾರದ ಆರು ದಿನಕ್ಕೂ ವಿಸ್ತರಿಸುವ ಬಗ್ಗೆ ನೈರುತ್ಯ ರೈಲ್ವೆ ವಲಯ ಸಲ್ಲಿಸಿದ್ದ ಪ್ರಸ್ತಾವನೆಯನ್ನು ರೈಲ್ವೆ ಸಚಿವಾಲಯ ಒಪ್ಪಿಕೊಂಡಿದೆ.

ಬೆಂಗಳೂರಿನ ಹೊರಡುವ ರೈಲಿನ ಈಗಿನ ಕೆಎಸ್​ಆರ್​ ಬೆಂಗಳೂರು ಟರ್ಮಿನಲ್​ನಿಂದ ಬೈಯಪ್ಪನಹಳ್ಳಿಗೆ ಶಿಫ್ಟ್​ ಮಾಡಲಾಗಿದೆ. ಈ ರೈಲು ಬೈಯಪ್ಪನಹಳ್ಳಿ, ಕಂಟೋನ್ಮೆಂಟ್​, ಕೆಂಗೇರಿ ಮಾರ್ಗವಾಗಿ ಸಂಚರಿಸಲಿದೆ.

ಶೀಘ್ರದಲ್ಲೇ ಆರು ದಿನ ಸಂಚಾರ ಆರಂಭದ ದಿನಾಂಕವನ್ನು ರೈಲ್ವೆ ಸಚಿವಾಲಯ ಪ್ರಕಟಿಸಲಿದೆ.

LEAVE A REPLY

Please enter your comment!
Please enter your name here