ಆಗಸ್ಟ್ 1ರಿಂದ ಬೆಂಗಳೂರಲ್ಲಿ ಹೋಟೆಲ್ ತಿಂಡಿ-ತಿನಿಸುಗಳು ದುಬಾರಿಯಾಗಲಿವೆ. ಆಹಾರ ಪದಾರ್ಥಗಳ ಬೆಲೆಯನ್ನು ಶೇಕಡಾ 10ರಷ್ಟು ಹೆಚ್ಚಿಸಲು ಬೃಹತ್ ಬೆಂಗಳೂರು ಹೋಟೆಲ್ ಮಾಲೀಕರ ಸಂಘ ನಿರ್ಧರಿಸಿದೆ.
ಆಗಸ್ಟ್ 1ರಿಂದ ನಂದಿನಿ ಹಾಲಿನ ಬೆಲೆ ಲೀಟರ್ಗೆ 3 ರೂಪಾಯಿ ಹೆಚ್ಚಳ ಆಗಿರುವುದು, ತರಕಾರಿ ಮತ್ತು ಬೇಳೆಕಾಳುಗಳ ಬೆಲೆ ದುಬಾರಿ ಆಗಿರುವ ಹಿನ್ನೆಲೆಯಲ್ಲಿ ಬೆಲೆ ಏರಿಕೆ ಅನಿವಾರ್ಯ ಎಂದು ಸಂಘ ಹೇಳಿದೆ.
ಸಾಮಾನ್ಯವಾಗಿ ಹೊಸ ಆರ್ಥಿಕ ವರ್ಷ ಅಂದರೆ ಏಪ್ರಿಲ್ 1ರಿಂದ ಹೋಟೆಲ್ ಆಹಾರಗಳ ಬೆಲೆಯಲ್ಲಿ ಏರಿಕೆ ಆಗುತ್ತಿತ್ತು. ಆದರೆ ಈ ಬಾರಿ ಬೆಲೆ ಹೆಚ್ಚಳದ ನಿರ್ಧಾರವನ್ನು ಮುಂದೂಡಲಾಗಿತ್ತು.
ಈಗಾಗಲೇ ಬೆಲೆ ಏರಿಕೆ ಮಾಡಿರುವ ಹೋಟೆಲ್ಗಳು ಮತ್ತೆ ದರ ಹೆಚ್ಚಳ ಮಾಡುವಂತಿಲ್ಲ. ದರ ಹೆಚ್ಚಳ ಮಾಡದ ಹೋಟೆಲ್ಗಳಿಗೆ ಮಾತ್ರ ಆಗಸ್ಟ್ 1ರಿಂದ ಬೆಲೆ ಏರಿಕೆಗೆ ಅವಕಾಶವಿದೆ ಎಂದು ಸಂಘ ಹೇಳಿದೆ.
ADVERTISEMENT
ADVERTISEMENT