Bengaluru Double Murder: MD, CEO ಕೊಲೆಗೆ ಸುಪಾರಿ ಕೊಟ್ಟಿದ್ದ ಎದುರಾಳಿ ಕಂಪನಿ ಮಾಲೀಕನ ಬಂಧನ

ಬೆಂಗಳೂರಲ್ಲಿ ಏರಾನಿಕ್ಸ್ ಮೀಡಿಯಾ ಪ್ರೈವೇಟ್​ ಲಿಮಿಟೆಡ್​ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಮುಖ್ಯ ನಿರ್ವಹಣಾಧಿಕಾರಿ ಹತ್ಯೆ ಸಂಬಂಧ ಜಿ-ನೆಟ್​ ಕಂಪನಿಯ ಮಾಲೀಕನನ್ನು ಪೊಲೀಸರು ಬಂಧಿಸಿದ್ದಾರೆ.

ಬನ್ನೇರುಘಟ್ಟ ರಸ್ತೆಯಲ್ಲಿ ಜಿ-ನೆಟ್​ ಕಂಪನಿ ಮಾಲೀಕ ಅರುಣ್​ ಕುಮಾರ್​​ನನ್ನು ಬಂಧಿಸಲಾಗಿದೆ. ಈತ ಆಮ್​ ಆದ್ಮಿ ಪಕ್ಷದಲ್ಲೂ ಗುರುತಿಸಿಕೊಂಡಿದ್ದ.

ತಮ್ಮದೇ ಹೊಸ ಕಂಪನಿ ಆರಂಭಿಸುವುದಕ್ಕೂ ಮೊದಲು ಫಣೀಂದ್ರ ಸುಬ್ರಹ್ಮಣ್ಯ ಮತ್ತು ವಿನು ಕುಮಾರ್​ ಜಿ-ನೆಟ್​ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು.

ಜಿ-ನೆಟ್​ಗೆ ಪರ್ಯಾಯವಾಗಿ ಇಂಟರ್​ನೆಟ್​ ಸೌಲಭ್ಯ ಕೊಡುವ ಕಂಪನಿ ಆರಂಭಿಸಿದ್ದ ಫಣೀಂದ್ರ ಮತ್ತು ವಿನುಕುಮಾರ್​ ಜಿ-ನೆಟ್​​ನಲ್ಲಿ ಕೆಲಸ ಮಾಡುತ್ತಿದ್ದ ಇಂಜಿನಿಯರ್​ಗಳೂ ಸೇರಿದಂತೆ 20 ಸಿಬ್ಬಂದಿಯನ್ನು ತಮ್ಮ ಕಂಪನಿಗೆ ಸೆಳೆದಿದ್ದರು.

ಅಲ್ಲದೇ 299 ರೂಪಾಯಿ 100mbs ಇಂಟರ್​ನೆಟ್​ ಸೌಲಭ್ಯ ಕೊಡುವ ಮೂಲಕ 499 ರೂಪಾಯಿ ಇಂಟರ್​ನೆಟ್​ ಸೌಲಭ್ಯ ಕೊಡುವ ಮೂಲಕ ಜಿ-ನೆಟ್​​ ವ್ಯವಹಾರಕ್ಕೆ ಹೊಡೆತ ಕೊಟ್ಟಿದ್ದರು.

ಇದರಿಂದ ಕೆರಳಿದ್ದ ಜಿ-ನೆಟ್​ ಮಾಲೀಕ ಅರುಣ್​ ಕುಮಾರ್​ ಏರಾನಿಕ್ಸ್​ ಕಂಪನಿಯ ಎಂಡಿ ಫಣೀಂದ್ರ ಮತ್ತು ಸಿಇಒ ವಿನು ಕುಮಾರ್​ ಹತ್ಯೆಗೆ ಸುಪಾರಿ ಕೊಟ್ಟಿದ್ದ.

ಮೂವರು ಕೊಲೆ ಆರೋಪಿಗಳನ್ನು ಪೊಲೀಸರು ಕೆಲವೇ ಗಂಟೆಗಳಲ್ಲಿ ಬಂಧಿಸಿದ್ದರು.

ಕೊಲೆ ಆರೋಪಿಗಳಲ್ಲಿ ಒಬ್ಬನಾಗಿರುವ ಶಬರೀಶ್​ ಅಲಿಯಾಸ್​ ಜೋಕರ್​ ಫೆಲಿಕ್ಸ್​ ಈ ಹಿಂದೆ ಜಿ-ನೆಟ್​ನಲ್ಲಿ ಕೆಲಸ ಮಾಡುತ್ತಿದ್ದ. ಈತ ಮೂಲತಃ ಶಿವಮೊಗ್ಗದವನು. ಅರುಣ್​ ಕುಮಾರ್​ ತನಗೆ ಸುಪಾರಿ ಕೊಟ್ಟಿದ್ದರ ಬಗ್ಗೆ ವಿಚಾರಣೆ ವೇಳೆ ಬಾಯ್ಬಿಟ್ಟಿದ್ದ. ಅಲ್ಲದೇ ಬೆಂಗಳೂರಿನ ವಿನಯ್​ ರೆಡ್ಡಿ ಮತ್ತು ಸಂತೋಷ್​ನನ್ನೂ ಬಂಧಿತನಾಗಿದ್ದಾನೆ.

LEAVE A REPLY

Please enter your comment!
Please enter your name here