ADVERTISEMENT
ಬೆಂಗಳೂರಲ್ಲಿ ನಡೆದ ಇಬ್ಬರು ಉದ್ಯಮಿಗಳ ಸಂಬಂಧ ಬಿಜೆಪಿ ಮತ್ತು ಹಿಂದೂ ಪರ ಸಂಘಟನೆಗಳು ಸುಳ್ಳು ಸುದ್ದಿ ಹಬ್ಬಿಸಿವೆ.
ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮತ್ತು ಆಂಧ್ರ ಸಹ ಉಸ್ತುವಾರಿ ಸುನಿಲ್ ದಿಯೋಧರ್ ಅವರು ಬೆಂಗಳೂರಲ್ಲಿ ಹಿಂದೂ ಶ್ರೀಗಳ ಹತ್ಯೆಯಾಗಿದೆ ಎಂದು ಟ್ವೀಟಿಸಿ ಸುಳ್ಳು ಹಬ್ಬಿಸಿದ್ದಾರೆ. ಟಿಪ್ಪೂ ಸುಲ್ತಾನ್ ಸಿದ್ಧಾಂತಿಗಳಿಂದ ಕರ್ನಾಟಕದಲ್ಲಿ ಅಪಾಯಕಾರಿ ಸ್ಥಿತಿ ಇದೆ, ಎಲ್ಲರೂ ಪ್ರತಿಭಟಿಸಬೇಕು ಎಂದು ಟ್ವೀಟಿಸಿದ್ದಾರೆ.
ಕರ್ನಾಟಕ ಹಿಂದೂ ಜನಜಾಗೃತಿ ಸಮಿತಿಯ ವಕ್ತಾರ ಮೋಹನ್ ಗೌಡ ಬೆಂಗಳೂರಲ್ಲಿ ಹಿಂದೂ ನಾಯಕನ ಕಗ್ಗೊಲೆ ಆಗಿದೆ ಎಂದು ಟ್ವೀಟ್ ಮಾಡಿದ್ದಾರೆ.
ಇಂದೂ ಮಕ್ಕಳ್ ಕಚ್ಚಿ ಮತ್ತು ಅಮಿತಾಭ್ ಚೌಧರಿ ಎಂಬ ಟ್ವಿಟ್ಟರ್ ಹ್ಯಾಂಡಲ್ನಲ್ಲೂ ಹಿಂದೂ ನಾಯಕನ ಹತ್ಯೆಯಾಗಿದೆ ಎಂದು ಟ್ವೀಟಿಸಿ ಪ್ರಚೋದಿಸಲಾಗಿದೆ.
ಕಗ್ಗೊಲೆಗೆ ಕಾರಣ ಏನು..?
ಫೈಬರ್ನೆಟ್ ಉದ್ಯಮದಲ್ಲಿ ದ್ವೇಷದಿಂದಾಗಿ ಬೆಂಗಳೂರಲ್ಲಿ ನಡೆದಿದ್ದ ಖಾಸಗಿ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಫಣೀಂದ್ರ ಸುಬ್ರಹ್ಮಣ್ಯ ಮತ್ತು ಸಿಇಒ ವಿನು ಕುಮಾರ್ ಹತ್ಯೆ ಮಾಡಲಾಗಿದೆ.
ಕೊಲೆ ಆರೋಪಿಗಳಾದ ಶಬರೀಶ್ ಅಲಿಯಾಸ್ ಫ್ಲೆಕ್ಸ್ ಸಂತೋಷ್ ಮತ್ತು ವಿನಯ್ ರೆಡ್ಡಿಯನ್ನು ಬಂಧಿಸಲಾಗಿದೆ.
ಬೆಂಗಳೂರಿನ ಹೆಬ್ಬಾಳ-ಕೆಂಪಾಪುರದಲ್ಲಿ ಏರಾನಿಕ್ಸ್ ಮೀಡಿಯಾ ಪ್ರೈವೇಟ್ ಲಿಮಿಟೆಡ್ನನ್ನು ಫಣೀಂದ್ರ ಮತ್ತು ವಿನು ಕುಮಾರ್ ನವೆಂಬರ್ 2022ರಲ್ಲಿ ಸ್ಥಾಪನೆ ಮಾಡಿದ್ದರು.
ಇವರು ತಮ್ಮ ಕಂಪನಿಗೆ ಎದುರಾಳಿ ಕಂಪನಿ ಜಿನೆಟ್ ಎಂಬ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ 20 ಮಂದಿ ಇಂಜಿನಿಯರ್ ಮತ್ತು ಇತರೆ ಸಿಬ್ಬಂದಿಯನ್ನೇ ನೇಮಕ ಮಾಡಿಕೊಂಡಿದ್ದರು.
ಅಲ್ಲದೇ ಕೇವಲ 299 ರೂಪಾಯಿ 100mbps ವೇಗದ ಬ್ರಾಂಡ್ಬ್ಯಾಂಡ್ ಇಂಟರ್ನೆಟ್ ಸೌಲಭ್ಯ ನೀಡುತ್ತಿದ್ದರು. ಜಿನೆಟ್ 499 ರೂಪಾಯಿಗೆ ಇಂಟರ್ನೆಟ್ ಸೌಲಭ್ಯ ನೀಡ್ತಿತ್ತು.
ಒಂದು ಕಡೆ ತಮ್ಮದೇ ಕಂಪನಿಯ ಸಿಬ್ಬಂದಿಯನ್ನು ಸೆಳೆದಿದ್ದು ಮತ್ತು ತಮಗಿಂತ ಅತ್ಯಂತ ಕಡಿಮೆ ಬೆಲೆಯಲ್ಲಿ ಇಂಟರ್ನೆಟ್ ನೀಡುತ್ತಿದ್ದ ಕಾರಣ ತಮ್ಮ ಉದ್ಯಮಕ್ಕೆ ಹಿನ್ನಡೆ ಆಗಿದೆ ಎಂದು ಕುಪಿತಗೊಂಡು ಫಣೀಂದ್ರ ಮತ್ತು ವಿನು ಕುಮಾರ್ ಕೊಲೆ ಮಾಡಲಾಗಿದೆ.
ಬಂಧಿತ ಫ್ಲೆಕ್ಸ್ ಅಲಿಯಾಸ್ ಶಬರೀಶ್ ಈ ಹಿಂದೆ ಜಿನೆಟ್ನಲ್ಲಿ ಕೆಲಸ ಮಾಡುತ್ತಿದ್ದ.
ADVERTISEMENT