ಬೆಳ್ತಂಗಡಿಯಲ್ಲಿ ಕಾಂಗ್ರೆಸ್​​ಗೆ ಸೋಲು ಹಿನ್ನೆಲೆ: ಮೂವರಿಗೆ ಶಿಸ್ತು ಸಮಿತಿ ನೋಟಿಸ್​

ಪಕ್ಷ ವಿರೋಧಿ ಚಟುವಟಿಕೆ ಹಿನ್ನೆಲೆಯಲ್ಲಿ ಕಾಂಗ್ರೆಸ್​ ನಾಯಕ ಮಾಜಿ ಸಚಿವ ಗಂಗಾಧರ್​ ಗೌಡ, ಅವರ ಪುತ್ರ ರಂಜನ್​ ಗೌಡ ಅವರಿಗೆ ಕೆಪಿಸಿಸಿ ನೋಟಿಸ್​ ನೀಡಿದೆ.

ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್​ ಅಭ್ಯರ್ಥಿ ಆಗಿದ್ದ ರಕ್ಷಿತ್​ ಶಿವರಾಂ ಅವರು ಸೋಲು ಅನುಭವಿಸಿದ್ದರು.

ರಂಜನ್​ ಗೌಡ ಅವರು ಬೆಳ್ತಂಗಡಿ ಗ್ರಾಮೀಣ ಬ್ಲಾಕ್​ ಕಾಂಗ್ರೆಸ್​ ಅಧ್ಯಕ್ಷರಾಗಿದ್ದಾರೆ. ಗಂಗಾಧರ ಗೌಡ ಅವರೂ ಈ ಬಾರಿ ಕಾಂಗ್ರೆಸ್​ ಟಿಕೆಟ್​ ಆಕಾಂಕ್ಷಿಯಾಗಿದ್ದರು.

ಮತ್ತೋರ್ವ ಕಾಂಗ್ರೆಸ್​ ಮುಖಂಡ ಶೈಲೇಶ್​ ಕುಮಾರ್​ ಅವರಿಗೂ ಕೆಪಿಸಿಸಿ ಶಿಸ್ತು ಸಮಿತಿ ನೋಟಿಸ್​ ನೀಡಿದೆ.

ಕಾಂಗ್ರೆಸ್​ ಪಕ್ಷದ ಪರ ಪ್ರಚಾರದಿಂದ ದೂರ ಉಳಿದಿದ್ದ ಈ ಮೂವರು ಬಿಜೆಪಿ ಶಾಸಕ ಹರೀಶ್​ ಪೂಂಜಾ ಅವರ ಪರವಾಗಿ ಪರೋಕ್ಷವಾಗಿ ಕೆಲಸ ಮಾಡಿ ಬಿಜೆಪಿ ಗೆಲ್ಲಲು ಸಹಾಯ ಮಾಡಿದ್ದರು ಎಂಬ ಆರೋಪದಡಿ ನೋಟಿಸ್​ ಜಾರಿಯಾಗಿದೆ.

ಶಿಸ್ತು ಸಮಿತಿ ಅಧ್ಯಕ್ಷ ಮಾಜಿ ರಾಜ್ಯಸಭಾ ಸಂಸದ ಕೆ ರೆಹಮಾನ್​ ಖಾನ್​ ಅವರು ನೋಟಿಸ್​ ನೀಡಿದ್ದು, ಜುಲೈ 8ರಂದು ಕೆಪಿಸಿಸಿ ಕಚೇರಿಗೆ ಹಾಜರಾಗಿ ವಿವರಣೆ ನೀಡುವಂತೆ ಸೂಚಿಸಿದ್ದಾರೆ. ವಿಧಾನಸಭಾ ಸೋಲಿನ ಸಂಬಂಧ ಕಾಂಗ್ರೆಸ್​ ಆಂತರಿಕ ವಿಚಾರಣೆ ನಡೆಸುತ್ತಿದೆ.

LEAVE A REPLY

Please enter your comment!
Please enter your name here