ಬಳ್ಳಾರಿ : ಕಲುಷಿತ ನೀರು ಸೇವಿಸಿ ವಾಂತಿ ಭೇದಿ ಪ್ರಕರಣ – ಅಸ್ವಸ್ಥರ ಸಂಖ್ಯೆ ಹೆಚ್ಚಳ

ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನ ಅಂಕಮ್ಮನಾಳ ಗ್ರಾಮದಲ್ಲಿ ಕಲುಷಿತ ನೀರು ಸೇವಿಸಿ ವಾಂತಿ ಭೇದಿ ಪ್ರಕರಣದಲ್ಲಿನ ಅಸ್ವಸ್ಥರ ಸಂಖ್ಯೆ 50ಕ್ಕೆ ಏರಿಕೆಯಾಗಿದೆ.

ಅಸ್ವಸ್ಥ 50 ಜನರಲ್ಲಿ 22 ಜನರು ಸಂಡೂರಿನ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.  ಅಂಕಮ್ಮನಾಳ ಗ್ರಾಮದ ತುರ್ತು ಚಿಕಿತ್ಸಾ ಕೇಂದ್ರದಲ್ಲಿ 6 ಜನರನ್ನು ದಾಖಲು ಮಾಡಲಾಗಿದೆ.

ಉಳಿದವರು ಬಳ್ಳಾರಿಯ ವಿಮ್ಸ್. ಹೊಸಪೇಟೆ, ಕೊಪ್ಪಳ ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ತಿಳಿದಬಂದಿದೆ. ಚರಂಡಿ ನೀರು ಮಿಶ್ರಿತ ನೀರು ಸೇವನೆಯಿಂದ ವಾಂತಿಭೇದಿ ಕಾಣಿಸಿಕೊಂಡಿದೆ.

ಆರೋಗ್ಯ ಇಲಾಖೆ ಅಧಿಕಾರಿಗಳು ಗ್ರಾಮದಲ್ಲೆ ಬೀಡುಬಿಟ್ಟಿದ್ದಾರೆ. ಕೆಲ ದಿನಗಳ ಹಿಂದೆಯಷ್ಟೇ ಈ ಗ್ರಾಮದ ಬಾಲಕಿಯೊಬ್ಬಳು ಕಲುಷಿತ ನೀರಿನ ಸೇವನೆಯಿಂದಾಗಿ ಸಾವನ್ನಪ್ಪಿದ್ದಳು.

LEAVE A REPLY

Please enter your comment!
Please enter your name here