ಭಾರತ ಪುಟ್ಬಾಲ್ ಸಂಸ್ಥೆ ಮೇಲಿನ ನಿಷೇಧ ರದ್ದು : U-17 ಮಹಿಳಾ ವಿಶ್ವಕಪ್ ಆಯೋಜನೆಗೆ ಅನುಮತಿ

ವಿಶ್ವ ಫುಟ್‌ಬಾಲ್‌ನ ಆಡಳಿತ ಮಂಡಳಿಯಾದ ಫಿಫಾ ಅಖಿಲ ಭಾರತ ಫುಟ್‌ಬಾಲ್ ಫೆಡರೇಶನ್ (ಎಐಎಫ್‌ಎಫ್) ಮೇಲೆ ವಿಧಿಸಿದ್ದ ನಿಷೇಧವನ್ನು ಹಿಂತೆಗೆದುಕೊಂಡಿದೆ. ಇದರೊಂದಿಗೆ ಅಂಡರ್-17 ಮಹಿಳಾ ವಿಶ್ವಕಪ್ 2022ರ ಆತಿಥ್ಯವನ್ನು ಭಾರತಕ್ಕೆ ಮತ್ತೆ ನೀಡಲಾಗಿದೆ.

ಎಐಎಫ್‌ಎಫ್ ಕಾರ್ಯಕಾರಿ ಸಮಿತಿಯು ದೈನಂದಿನ ವ್ಯವಹಾರಗಳ ಮೇಲೆ ಸಂಪೂರ್ಣ ಹಿಡಿತ ಸಾಧಿಸಿದ ನಂತರ ಫಿಫಾ ಈ ನಿರ್ಧಾರವನ್ನು ತೆಗೆದುಕೊಂಡಿದೆ. FIFA ಮತ್ತು ಏಷ್ಯನ್ ಫುಟ್‌ಬಾಲ್ ಫೆಡರೇಶನ್(AFC) AIFF ನಲ್ಲಿ ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡುವುದನ್ನು ಮುಂದುವರಿಸುತ್ತದೆ ಮತ್ತು ಸಮಯಕ್ಕೆ ಸರಿಯಾಗಿ ಚುನಾವಣೆಗಳನ್ನು ನಡೆಸುವಲ್ಲಿ AIFF ಅನ್ನು ಬೆಂಬಲಿಸುತ್ತದೆ.

ಇದನ್ನೂ ಓದಿ : Asia Cup 2022 : ಮಧ್ಯಂತರ ಕೋಚ್​​ ಆಗಿ ವಿವಿಎಸ್ ಲಕ್ಷ್ಮಣ್ ಆಯ್ಕೆ

ಎಐಎಫ್‌ಎಫ್‌ನ ವ್ಯವಹಾರಗಳನ್ನು ನಡೆಸಲು ನೇಮಿಸಲಾಗಿದ್ದ ಆಡಳಿತಾಧಿಕಾರಿಗಳ ತ್ರಿಸದಸ್ಯ ಸಮಿತಿಯನ್ನು ವಜಾಗೊಳಿಸಿ ಮತ್ತು ಎಐಎಫ್‌ಎಫ್ ಆಡಳಿತವು ದೈನಂದಿನ ವ್ಯವಹಾರಗಳ ಮೇಲೆ ಸಂಪೂರ್ಣ ಹಿಡಿತ ಸಾಧಿಸಿರುವುದನ್ನು ದೃಢಪಡಿಸಿದ ನಂತರ ಫಿಫಾ ಈ ನಿರ್ಧಾರ ಪ್ರಕಟಿಸಿದೆ.

ಅಖಿಲ ಭಾರತ ಫುಟ್‌ಬಾಲ್ ಫೆಡರೇಶನ್ (AIFF) ಅನ್ನು ಅಂತಾರಾಷ್ಟ್ರೀಯ ಫುಟ್ಬಾಲ್ ಸಮಿತಿ (ಫೀಫಾ) ನಿಷೇಧಗೊಳಿಸಿದ ವಿಚಾರಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಈ ಮಹತ್ವದ ಆದೇಶ ನೀಡಿತ್ತು. ಎಐಎಫ್‌ಎಫ್‌ನ ವ್ಯವಹಾರಗಳನ್ನು ನಿರ್ವಹಿಸಲು, ಶೀಘ್ರದಲ್ಲೇ ಚುನಾವಣೆಗಳನ್ನು ನಿರ್ವಹಿಸಲು ಸಿಒಎ ಆದೇಶವನ್ನು ಭಾರತ ಫುಟ್‌ಬಾಲ್ ಫೆಡರೇಶನ್ ಆಡಳಿತಾಧಿಕಾರಿಗಳ ಸಮಿತಿ ರದ್ದುಗೊಳಿಸುವ ಮೂಲಕ ಸುಪ್ರೀಂ ಕೋರ್ಟ್ ಕೊನೆಗೊಳಿಸಿದೆ.

LEAVE A REPLY

Please enter your comment!
Please enter your name here