ಹರಕು ಬಾಯಿಗಳಿಗೆ ಹೊಲಿಗೆ ಬೀಳಲಿ – ಈಶ್ವರಪ್ಪಗೆ ಟಿಕೆಟ್​ ಕೊಡಬೇಡಿ- ಟಿಕೆಟ್​ ಆಕಾಂಕ್ಷಿ BJP MLC ಆಯನೂರು ಪೋಸ್ಟರ್​

KS Eshwarappa
KS Eshwarappa

ಶಿವಮೊಗ್ಗ ವಿಧಾನಸಭಾ ಕ್ಷೇತ್ರದಿಂದ ಮಾಜಿ ಸಚಿವ ಕೆ ಎಸ್​ ಈಶ್ವರಪ್ಪ ಅವರಿಗೆ ಟಿಕೆಟ್​ ನೀಡಬಾರದು ಮತ್ತು ತಮಗೆ ಟಿಕೆಟ್​ ನೀಡುವಂತೆ ಆಗ್ರಹಿಸಿ ಬಿಜೆಪಿ ವಿಧಾನಪರಿಷತ್​ ಸದಸ್ಯ ಆಯನೂರು ಮಂಜುನಾಥ್​ ಸಾರ್ವಜನಿಕ ಭಿತ್ತಿಪತ್ರಗಳನ್ನು, ಕಟೌಟ್​ಗಳನ್ನು ಹಾಕಿಸಿದ್ದಾರೆ.

ಹರಕು ಬಾಯಿಗಳಿಗೆ ಹೊಲಿಗೆ ಬೀಳಲಿ, ಮುರಿದ ಮನಸ್ಸುಗಳ ಬೆಸುಗೆಯಾಗಲಿ, ಶಿವಮೊಗ್ಗದಲ್ಲಿ ಶಾಂತಿ ಸೌಹಾರ್ದತೆ ನೆಲೆಸಲಿ

ಎಂಬ ಬರಹ ಇರುವ ಪೋಸ್ಟರ್​ಗಳನ್ನು ಮಾಜಿ ಸಚಿವ ಈಶ್ವರಪ್ಪ ಅವರನ್ನೇ ಗುರಿಯಾಗಿಸಿ ಆಯನೂರು ಮಂಜುನಾಥ್​ ಅವರು ಶಿವಮೊಗ್ಗ ನಗರದಲ್ಲಿ ಹಾಕಿಸಿದ್ದಾರೆ.

ಹಿಂದೂ ಬಾಂಧವರಿಗೆ ಯುಗಾದಿ ಹಬ್ಬದ ಶುಭಾಶಯಗಳು, ಮುಸಲ್ಮಾನ ಬಾಂಧವರಿಗೆ ರಂಜಾನ್​ ಹಬ್ಬದ ಶುಭಾಶಯಗಳು. ಎಲ್ಲರಿಗೂ ಹಬ್ಬದ ಶುಭಾಶಯಗಳು. ಈ ಬಾರಿ ಸ್ನೇಹಪ್ರಿಯ ಆಯನೂರು ಮಂಜುನಾಥ್​

ಎಂಬ ಬರಹ ಇರುವ ಪೋಸ್ಟರ್​ಗಳನ್ನು ಹಾಕಿದ್ದಾರೆ. 

ಬಿಜೆಪಿ ಟಿಕೆಟ್​ ಆಕಾಂಕ್ಷಿಯಾಗಿರುವ ಆಯನೂರು ಮಂಜುನಾಥ್​ ಒಂದು ವೇಳೆ ಟಿಕೆಟ್​ ಸಿಗದೇ ಹೋದರೆ ಬಂಡಾಯವಾಗಿ ಸ್ಪರ್ಧೆ ಮಾಡ್ತಾರಾ ಎನ್ನುವುದೇ ಕುತೂಹಲ.