ವಿಶ್ವ ಪ್ರಸಿದ್ದ ಸೈಂಟಿಫಿಕ್ ಚಿತ್ರ ಅವತಾರ್ ( Avatar ) ಇದೇ ಸೆಪ್ಟಂಬರ್ 23 ರಿಂದ ಚಿತ್ರಮಂದಿರಗಳಲ್ಲಿ ಮರು ಬಿಡುಗಡೆಯಾಗಲಿದೆ.
ಜೇಮ್ಸ್ ಕ್ಯಾಮರೂನ್ ಅವರು ಅವತಾರ್ ( Avatar ) ಚಿತ್ರ 4K ಡೈನಾಮಿಕ್ನಲ್ಲಿ ಪಾರ್ಮಾಟ್ನಲ್ಲಿ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಅವತಾರ್ ಚಿತ್ರದ ಮುಂದಿನ ಭಾಗ ಅವತಾರ್ : ದಿ ವೇ ಆಫ್ ವಾಟರ್ ಚಿತ್ರದ ಬಿಡುಗಡೆಗೆ 3 ತಿಂಗಳ ಮುಂಚೆಯೇ ಅವತಾರ್ ಥಿಯೇಟರ್ಗಳಲ್ಲಿ ಮರು ಬಿಡುಗಡೆಯಾಗಲಿದೆ.
20th Century ಎನ್ನುವ ಟ್ವಿಟರ್ ಹ್ಯಾಂಡಲ್, 2009 ರಲ್ಲಿ ಬಿಡುಗಡೆಯಾಗಿದ್ದ ಅವತಾರ್ ( Avatar ) ಚಿತ್ರದ ಟ್ರೈಲರ್ ಹಂಚಿಕೊಂಡು, ಚಿತ್ರ ಮರುಬಿಡುಗಡೆ ದಿನಾಂಕವನ್ನು ತಿಳಿಸಿದೆ.
ಇದನ್ನೂ ಓದಿ : 160 ಭಾಷೆಗಳಲ್ಲಿ ಅವತಾರ್ ಚಿತ್ರ : ಬಿಡುಗಡೆ ದಿನಾಂಕ ಘೋಷಣೆ
ಅವತಾರ್ ಚಿತ್ರದ ನಾಯಕ ನಟ ಸ್ಯಾಮ್ ವರ್ತಿಂಗ್ಟನ್ ಮತ್ತು ನಾಯಕಿ ನಟಿ ಜೋಯ್ ಸಲ್ದಾನ 2 ವಾರಗಳಕಾಲ ಸೀಮಿತ ಅವಧಿ ಮೀಸಲಿಟ್ಟಿದ್ದಾರೆ.
On September 23 #Avatar returns to the big screen for a limited time only. Watch the new trailer now 💙 pic.twitter.com/8RtVkD5P3p
— 20th Century Studios (@20thcentury) August 23, 2022
ಜೇಮ್ಸ್ ಕ್ಯಾಮರೂನ್ ಅವರ ಅವತಾರ್ ಚಿತ್ರ ವಿಶ್ವದಲ್ಲಿಯೇ ಇದುವರೆಗಿನ ಅತಿ ಹೆಚ್ಚು ಗಳಿಕೆ ಮಾಡಿದ ಸಿನೆಮಾ ಎಂಬ ಖ್ಯಾತಿಗೆ ಒಳಗಾಗಿದೆ. ಅಲ್ಲದೇ, 9 ಅಕಾಡೆಮಿ ಪ್ರಶಸ್ತಿಗಳಿಗೆ ನಾಮನಿರ್ದೇಶನಗೊಂಡಿದೆ. ಉತ್ತಮ ಸಿನೆಮಟೋಗ್ರಫಿ, ಪ್ರೊಡಕ್ಷನ್ ಡಿಸೈನ್ ಮತ್ತು ವಿಶ್ಯುವಲ್ ಎಫೆಕ್ಟ್ ವಿಭಾಗಗಳಲ್ಲಿ 3 ಆಸ್ಕರ್ ಪ್ರಶಸ್ತಿಗಳನ್ನು ಈ ಸಿನೆಮಾ ಪಡೆದುಕೊಂಡಿದೆ.
ಅವತಾರ್ 2 ಚಿತ್ರ ವಿಶ್ವಾದ್ಯಂತ ಬಿಡುಗಡೆಗೂ ಮುಂಚೆಯೇ ದೊಡ್ಡ ಕ್ರೇಜ್ ಪಡೆದುಕೊಂಡಿದೆ. ಭಾರತೀಯ ಭಾಷೆಗಳಾದ ಕನ್ನಡ ಸೇರಿದಂತೆ ತಮಿಳು, ತೆಲುಗು, ಮಲಯಾಳಂ, ಹಿಂದಿ ಭಾಷೆಗಳಲ್ಲಿ ಡಿಸೆಂಬರ್ 16 ರಂದು ಬಿಡುಗಡೆಯಾಗಲಿದೆ.
ಇದನ್ನೂ ಓದಿ : DBoss: ನಟ ದರ್ಶನ್ ಓದುತ್ತಿರುವ ಆ ಪುಸ್ತಕದ ವಿಶೇಷತೆ ಏನು ಗೊತ್ತಾ..?