Karkala: ಕಾರ್ಕಳದಲ್ಲಿ ಆಟೋ ಡ್ರೈವರ್​ ಆತ್ಮಹತ್ಯೆ

ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಮನನೊಂದ ಆಟೋ ಚಾಲಕ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಾರ್ಕಳ ತಾಲೂಕಿನ ಮಿಯಾರು ಕುಂಟಿಬೈಲು ನಿವಾಸಿಯಾಗಿರುವ 50 ವರ್ಷದ ಹರೀಶ್​ ಶೆಟ್ಟಿ ಆತ್ಮಹತ್ಯೆಗೆ ಶರಣಾಗಿದ್ದಾರೆ.

ಜುಲೈ 12ರಂದು ಬುಧವಾರ ಬಾವಿಗೆ ಹಾರಿ ಸಾವಿಗೆ ಶರಣಾಗಿದ್ದಾರೆ. ಇವರ ಮತ್ತು ಪತ್ನಿಯ ಜೊತೆಗಿನ ಸಂಬಂಧ ಹಳಸಿತ್ತು. ಪತ್ನಿ ತವರು ಮನೆ ಸೇರಿದ್ದರಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

ತಾನು ಆತ್ಮಹತ್ಯೆ ಮಾಡಿಕೊಳ್ಳುವ ತನ್ನ ಸ್ನೇಹಿತರೊಂದಿಗೆ ಹರೀಶ್​ ಶೆಟ್ಟಿ ಹೇಳಿಕೊಂಡಿದ್ದರು. ಆದರೆ ಪದೇ ಪದೇ ಈ ಮಾತುಗಳನ್ನಾಡುತ್ತಿದ್ದ ಕಾರಣ ಗೆಳೆಯರು ಇವರ ಮಾತನ್ನು ಗಂಭೀರವಾಗಿ ತೆಗೆದುಕೊಂಡಿರಲಿಲ್ಲ.

ಸಲಹೆ: ಆತ್ಮಹತ್ಯೆ ಪರಿಹಾರವಲ್ಲ. ತಜ್ಞರ ಸಲಹೆ ಪಡೆಯುವ ಮೂಲಕ ಮಾನಸಿಕ ಒತ್ತಡ ನಿವಾರಣೆ ನಿವಾರಿಸಬಹುದು. ಉಚಿತ ಸಹಾಯವಾಣಿ ಸಂಖ್ಯೆ: 9152987821

LEAVE A REPLY

Please enter your comment!
Please enter your name here