Shivamogga: JCB ಬಳಸಿ ATM ಯಂತ್ರ ದೋಚಲು ಯತ್ನ

ಜೆಸಿಬಿ ಬಳಸಿ ಎಟಿಎಂ ಯಂತ್ರವನ್ನೇ ಕದ್ದೊಯ್ಯಲು ಯತ್ನಿಸಿದ ಘಟನೆ ಶಿವಮೊಗ್ಗ ನಗರದ ವಿನೋಬಾನಗರದಲ್ಲಿ ನಡೆದಿದೆ.

ವಿನೋಬಾನಗರದಲ್ಲಿರುವ ದೇವಸ್ಥಾನದ ಮುಂಭಾಗದಲ್ಲಿ ಎಕ್ಸಿಸ್​ ಬ್ಯಾಂಕ್​ನ ಎಟಿಎಂ ಇದೆ. ಜೆಸಿಬಿಯಿಂದ ಎಟಿಎಂನ ಗಾಜಿನ ಬಾಗಿಲನ್ನು ಪುಡಿ ಮಾಡಿ ನುಗ್ಗಿಸಿ ಜೆಸಿಬಿ ಬಾಯಿಯಿಂದ ಎಟಿಎಂ ಯಂತ್ರವನ್ನೇ ಎಳೆದು ಎಗರಿಸಿಕೊಂಡು ಹೋಗಲು ಯತ್ನಿಸಿದ್ದಾನೆ.

ಜೆಸಿಬಿಯ ಬಾಯಿಯನ್ನು ಎಟಿಎಂ ಕೇಂದ್ರದೊಳಗೆ ಒಳಗೆ ನುಗ್ಗಿಸಿದ್ದರಿಂದ ಎಟಿಎಂ ಯಂತ್ರಕ್ಕೆ ಹಾನಿಯಾಗಿದೆ.

ಆದರೆ ರಾತ್ರಿ ಹೊತ್ತು ಗಸ್ತು ಪೊಲೀಸರು ಬರುವುದನ್ನು ಕಂಡು ಜೆಸಿಬಿಯನ್ನು ಸ್ಥಳದಲ್ಲೇ ಬಿಟ್ಟು ದುಷ್ಕರ್ಮಿ ಪರಾರಿಯಾಗಿದ್ದಾನೆ.

ಜೆಸಿಬಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಕಳ್ಳನಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

LEAVE A REPLY

Please enter your comment!
Please enter your name here