ಸಹಾಯಕ ಪ್ರಧ್ಯಾಪಕರ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸೌಮ್ಯ ಎನ್ನುವವರನ್ನು ಪೊಲೀಸರು ಮೈಸೂರಿನಲ್ಲಿ ಬಂಧಿಸಿದ್ದಾರೆ.
ಮಾರ್ಚ್ 14 ರಂದು ನಿಗದಿಯಾಗಿದ್ದ ಸಹಾಯಕ ಪ್ರಧ್ಯಾಪಕರ ಪರೀಕ್ಷೆಯ ಭೂಗೋಳ ಪ್ರಶ್ನೆ ಪತ್ರಿಕೆ ಪರೀಕ್ಷೆ ಆರಂಭಕ್ಕಿಂತ ಅರ್ಧ ಗಂಟೆ ಮುಂಚೆ ಬೆಳಿಗ್ಗೆ 8:30 ಕ್ಕೆ ಸೋರಿಕೆಯಾಗಿತ್ತು. ಸೌಮ್ಯ ಎನ್ನುವವರ ವಾಟ್ಸಾಪ್ನಿಂದಲೇ 18 ಪ್ರಶ್ನೆಗಳು ಸೋರಿಕೆಯಾಗಿ, ವಾಟ್ಸಾಪ್ನಲ್ಲಿ ಹರಿದಾಡಿದ್ದವು.
ಈ ಸಂಬಂಧ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕರು ಮಲ್ಲೇಶ್ವರಂ ಪೊಲೀಸ್ ಠಾಣೆಗೆ ಇದೇ ಏಪ್ರೀಲ್ 22 ರಂದು ಸೌಮ್ಯ ಎನ್ನುವವರ ವಿರುದ್ಧ ಪ್ರಕರಣ ದಾಖಲಿಸಿದ್ದರು.
ಪ್ರಕರಣ ದಾಖಲಾದ ನಂತರ ತನಿಖೆ ಚುರುಕುಗೊಳಿಸಿದ್ದ ಪೊಲೀಸರು ಭಾನುವಾರ ಮೈಸೂರಿನಲ್ಲಿ ಸೌಮ್ಯ ಅವರನ್ನು ಬಂಧಿಸಿ ಬೆಂಗಳೂರಿಗೆ ಕರೆತಂದಿದ್ದಾರೆ. ಪ್ರಸ್ತುತ ನ್ಯಾಯಾಂಗ ಬಂಧನದಲ್ಲಿರುವ ಅವರನ್ನು ಪೊಲೀಸ್ ವಶಕ್ಕೆ ನೀಡುವಂತೆ ಮನವಿ ಮಾಡಿದ್ದೇವೆ ಎಂದು ಉತ್ತರ ವಿಭಾಗದ ಡಿಸಿಪಿ ತಿಳಿಸಿದ್ದಾರೆ.