ಈ ಚಹಾದ ಎಸಳಿಗೆ ಕೆಜಿಗೆ ಎಷ್ಟು ರೂಪಾಯಿ ಗೊತ್ತಾ..? ಬರೋಬ್ಬರೀ ಒಂದು ಲಕ್ಷದ 15 ಸಾವಿರ ರೂಪಾಯಿ. ಅಸ್ಸಾಂನ ಪ್ರಸಿದ್ಧ ಮನೋಹರಿ ಗೋಲ್ಡ್ ಟೀ (Manohari Gold Tea) ಕೆಜಿಗೆ 1.15 ಲಕ್ಷ ರೂಪಾಯಿಗೆ ಬಿಕರಿ ಆಗಿದೆ.
ಗುವಾಹಟಿ ಟೀ ಕೇಂದ್ರದಲ್ಲಿ ನಡೆದ ಹರಾಜಿನಲ್ಲಿ ಆರ್ ಕೆ ಟೀ ಸೇಲ್ಸ್ ಖರೀದಿ ಮಾಡಿದೆ.
ಏನಿದರ ವಿಶೇಷತೆ..?:
ಮನೋಹರಿ ಗೋಲ್ಡ್ ಟೀಯ ತವರು ಅಸ್ಸಾಂ (Assam) ರಾಜ್ಯದ ದಿಬ್ರುಘರ್.
ಈ ಚಹಾದ ಎಸಳು ಅಪ್ಪಟ್ಟ 24 ಕ್ಯಾರೆಟ್ ಚಿನ್ನದಂತೆಯೇ ಹೊಳೆಯುತ್ತದೆ.
ಸೂರ್ಯ ಹುಟ್ಟುವುದಕ್ಕೂ ಮೊದಲು ಅಂದರೆ ಚಹಾದ ಎಸಳನ್ನು ಕೀಳಲಾಗುತ್ತದೆ. ಸೂರ್ಯನ ಬಿಸಿಲು ಬಿದ್ದ ಬಳಿಕ ಅದರ ಲಕ್ಷಣಗಳು ಬದಲಾಗುತ್ತವೆ ಎಂಬ ಕಾರಣಕ್ಕೆ ಸೂರ್ಯೋದಯಕ್ಕೂ ಮೊದಲೇ ಚಹಾದ ಎಸಳನ್ನು ಕೊಯ್ಯಲಾಗುತ್ತದೆ.
ಈ ಚಹಾದಲ್ಲಿ ಉಳಿದ ಚಹಾದ ಪುಡಿಗಳಿಗೆ ಹೋಲಿಸಿದ್ರೆ ರೋಗಪ್ರತಿರೋಧಕ ಅಂಶಗಳು ಅತ್ಯಧಿಕ ಮತ್ತು ಇವು ದೇಹಕ್ಕೆ ಅತ್ಯಂತ ಉತ್ತೇಜದಾಯಕ ಅಂಶಗಳನ್ನು ಹೊಂದಿರುತ್ತವೆ. ಹೀಗಾಗಿ ಮನೋಹರಿ ಗೋಲ್ಡ್ ಟೀ ಅಷ್ಟೊಂದು ದುಬಾರಿ.
ಈ ಹಿಂದೆ ಇದೇ ಚಹಾ ಈ ಹಿಂದೆ 99,999 ರೂಪಾಯಿಗೆ ಬಿಕರಿ ಆಗಿತ್ತು.
ADVERTISEMENT
ADVERTISEMENT