ಡ್ರಗ್ಸ್ ಸುಳಿಯಲ್ಲಿ ಅಶುರೆಡ್ಡಿ ?- ಟಾಲಿವುಡ್​​ನಲ್ಲಿ ಹೊಸ ಕಂಪನ

ತೆಲುಗು ಸಿನಿಮಾ ಲೋಕ ಮತ್ತೊಮ್ಮೆ ಡ್ರಗ್ಸ್ ಸುಳಿಗಳು ಎದ್ದಿವೆ.

ಟಾಲಿವುಡ್ ನಟಿ, ಬಿಗ್‌ಬಾಸ್ ಖ್ಯಾತಿಯ ಅಶುರೆಡ್ಡಿ ಮತ್ತು ನಟಿ ಜ್ಯೋತಿ ಹೆಸರು ಇತ್ತೀಚಿಗೆ ಡ್ರಗ್ಸ್ ಕೇಸ್‌ನಲ್ಲಿ ಅರೆಸ್ಟ್ ಆದ ಕಬಾಲಿ ನಿರ್ಮಾಪಕ ಕೆಪಿ ಚೌಧರಿ ಕಾಲ್‌ಲಿಸ್ಟ್‌ನಲ್ಲಿರುವುದು ಪೊಲೀಸ್ ತನಿಖೆಯಲ್ಲಿ ಬಯಲಾಗಿದೆ.

ಟಾಲಿವುಡ್‌ನಲ್ಲಿ ಐಟಂ ಸಾಂಗ್‌ಗೆ ಫೇಮಸ್ ಆದ ನಟಿಯ ಹೆಸರು ಕೂಡ ಪ್ರಮುಖವಾಗಿ ಕೇಳಿಬರುತ್ತಿದೆ.

 

ಕೆಪಿ ಚೌಧರಿ ಕಾಲ್‌ಲಿಸ್ಟ್ ಡಿಕೋಡ್ ಮಾಡಿದ ಪೊಲೀಸರಿಗೆ, ಕೆಪಿ ಚೌಧರಿ-ಅಶುರೆಡ್ಡಿ ನಡುವೆ ನೂರಾರು ಫೋನ್ ಕಾಲ್ಸ್ ಇರುವುದು ಕಂಡುಬಂದಿದೆ.

ಅಶು ರೆಡ್ಡಿ ಮಾತ್ರವಲ್ಲ.. ಕೆಲ ಕ್ಯಾರೆಕ್ಟರ್ ಆರ್ಟಿಸ್ಟ್‌ಗಳ ಹೆಸರು, ಕೆಲ ರಾಜಕಾರಣಿಗಳ ಮಕ್ಕಳ ಹೆಸರು ಕೂಡ ಕೆಪಿ ಚೌಧರಿ ಕಾಲ್‌ಲಿಸ್ಟ್‌ನಲ್ಲಿದೆ.

ಈ ಫೋನ್ ಕಾಲ್ಸ್ ಬಗ್ಗೆ ವಿಚಾರಣೆ ನಡೆಸಿದ ಸಂದರ್ಭದಲ್ಲಿ ಕೆಪಿ ಚೌಧರಿ ಯಾವುದೇ ವಿಚಾರವನ್ನು ಬಾಯ್ಬಿಟ್ಟಿಲ್ಲ.



ಯಾರು ಅಶುರೆಡ್ಡಿ?

ಅಶುರೆಡ್ಡಿ ಸೋಷಿಯಲ್ ಮೀಡಿಯಾದಲ್ಲಿ ಜ್ಯೂನಿಯರ್ ಸಮಂತಾ ತೆಲುಗು ಬಿಗ್‌ಬಾಸ್‌ನಲ್ಲಿ ಮಿಂಚಿದ್ದರು.

ಖ್ಯಾತ ನಿರ್ದೇಶಕ ರಾಮ್‌ಗೋಪಾಲ್ ವರ್ಮಾ ಜೊತೆಗೆ ಕೆಲವು ವೀಡಿಯೋಗಳ ಮೂಲಕ ಫೇಮಸ್ ಆಗಿದ್ದರು.

ಇನ್‌ಸ್ಟಾ ಗ್ರಾಂನಲ್ಲಿ ಅಶುರೆಡ್ಡಿಗೆ ೨ ಲಕ್ಷ ಫಾಲೋವರ್ಸ್ ಇದ್ದಾರೆ.

ಸಿನಿಮಾಗಳಲ್ಲಿ ಅವಕಾಶ ಇಲ್ಲದಿದ್ದರೂ ವಿದೇಶ ಪ್ರವಾಸ ಮಾಡುತ್ತಾ ಲಕ್ಷುರಿ ಜೀವನವನ್ನು ನಡೆಸುತ್ತಿದ್ದಾರೆ.

ಈಗ ಡ್ರಗ್ಸ್ ಕೇಸ್ ಆರೋಪಿ ಜೊತೆಗಿನ ಸಂಪರ್ಕ ಬಯಲಿಗೆ ಬಂದಿರುವ ಕಾರಣ ಅಶುರೆಡ್ಡಿ ಲಕ್ಷುರಿ ಜೀವನಕ್ಕೆ ಇದೇನಾ ಮೂಲ ಎಂಬ ಪ್ರಶ್ನೆಗಳು ಕೇಳಿಬರತೊಡಗಿವೆ.

ಪೊಲೀಸ್ ತನಿಖೆಯಲ್ಲಿ ಸತ್ಯಾಂಶ ಬಯಲಾಗಬೇಕಿದೆ.