ರಾಜಸ್ಥಾನದಲ್ಲಿನ ಕಾಂಗ್ರೆಸ್ನ ಒಳಬೇಗುದಿ ಇಂದು ಸ್ಪೋಟಗೊಂಡಿದೆ. ಕಾಂಗ್ರೆಸ್ನ ಸಚಿವ ಹಾಗೂ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರ ನಿಕಟವರ್ತಿಯೊಬ್ಬರು ಇಂದು ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.
ಅಶೋಕ್ ಚಂದನಾ ಅವರು ರಾಜಸ್ಥಾನದಲ್ಲಿ ಕ್ರೀಡೆ ಮತ್ತು ಯುವ ವ್ಯವಹಾರಗಳು, ಕೌಶಲ್ಯ ಅಭಿವೃದ್ಧಿ, ಉದ್ಯೋಗ, ಉದ್ಯಮಶೀಲತೆ ಮತ್ತು ವಿಪತ್ತು ನಿರ್ವಹಣೆ ಮತ್ತು ಪರಿಹಾರ ಇಲಾಖೆಗಳ ಸಚಿವರಾಗಿ ಕಾರ್ಯನಿರ್ವಹಿಸುತ್ತಿದ್ದರು.
ಈ ಬಗ್ಗೆ ಟ್ವಿಟ್ ಮಾಡಿರುವ ಚಂದನಾ ಅವರು, ಮುಖ್ಯಮಂತ್ರಿಗಳೇ, ಈ ಪೀಡೆಯ ಸಚಿವ ಸ್ಥಾನದಿಂದ ನನ್ನನ್ನು ಮುಕ್ತಗೊಳಿಸಿ. ನನ್ನ ಎಲ್ಲಾ ಸ್ಥಾನದ ಉಸ್ತುವಾರಿಯನ್ನು ಕುಲದೀಪ್ ರಂಕಾ ಅವರಿಗೆ ನೀಡಿ. ಏಕೆಂದರೆ ಅವರೇ ಎಲ್ಲಾ ಇಲಾಖೆಗಳ ಸಚಿವರಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿ ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.
ಡುಂಗರ್ಪುರವನ್ನು ಕ್ಷೇತ್ರದ ಶಾಸಕ ಹಾಗೂ ರಾಜಸ್ಥಾನದ ಯುವ ಕಾಂಗ್ರೆಸ್ ಮುಖ್ಯಸ್ಥ ಶ್ರೀ ಘೋಗ್ರಾ ಅವರು ಮೇ 18 ರಂದು ತಮ್ಮನ್ನು ಕಡೆಗಣಿಸಲಾಗುತ್ತಿದೆ ಎಂದು ರಾಜೀನಾಮೆ ನೀಡಿದರು. ಈ ಬೆನ್ನಲ್ಲೇ ಶ್ರೀ ಚಂದನಾ ಅವರು ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.