ಪಂಜಾಬ್​ನ 10 ಎಎಪಿ ಶಾಸಕರನ್ನು ಸಂಪರ್ಕಿಸಿದ ಬಿಜೆಪಿ – ಅರವಿಂದ್ ಕೇಜ್ರಿವಾಲ್ ಆರೋಪ

Democracy Is Over

ಪಂಜಾಬ್ ಸರ್ಕಾರವನ್ನು ಉರುಳಿಸಲು ಬಿಜೆಪಿ ತನ್ನ ಆಮ್ ಆದ್ಮಿ ಪಕ್ಷದ (ಎಎಪಿ) 10 ಶಾಸಕರನ್ನು ಸಂಪರ್ಕಿಸಿದೆ ಎಂದು ಅರವಿಂದ್ ಕೇಜ್ರಿವಾಲ್ ಇಂದು ಆರೋಪಿಸಿದ್ದಾರೆ. ಗೋವಾದಲ್ಲಿ 8 ಜನ ಕಾಂಗ್ರೆಸ್​ ಶಾಸಕರು ಬಿಜೆಪಿ ಸೇರ್ಪಡೆಯಾಗುತ್ತಿದ್ದಂತೆ ಈ ಆರೋಪ ಮಾಡಿದ್ದಾರೆ.

ನಮ್ಮ 10 ಶಾಸಕರನ್ನು ಪಂಜಾಬ್‌ನಲ್ಲಿ ಬಿಜೆಪಿ ಸಂಪರ್ಕಿಸಿದೆ. ಅವರು ಶಾಸಕರನ್ನು ಖರೀದಿಸುತ್ತಿದ್ದಾರೆ ಮತ್ತು ಸರ್ಕಾರಗಳನ್ನು ಬೀಳಿಸುತ್ತಿದ್ದಾರೆ ಎಂದು ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.

ಬಿಜೆಪಿಯು ದೆಹಲಿಯಲ್ಲಿ ‘ಆಪರೇಷನ್ ಕಮಲ’ ಮಾಡಲು ಪ್ರಯತ್ನಿಸುತ್ತಿದೆ ಮತ್ತು ಶಾಸಕರನ್ನು ಪಕ್ಷಾಂತರಕ್ಕೆ ಪ್ರೇರೇಪಿಸುತ್ತದೆ ಎಂದು ಕೇಜ್ರಿವಾಲ್ ಇತ್ತೀಚೆಗಷ್ಟೇ ಆರೋಪಿಸಿದ್ದರು. ದೆಹಲಿಯಲ್ಲಿ ವಿಫಲವಾಗಿರುವ ಬಿಜೆಪಿ ಪಂಜಾಬ್‌ನತ್ತ ತನ್ನ ಗಮನವನ್ನು ಹರಿಸಿದೆ ಎಂದು ಎಎಪಿ ಆರೋಪಿಸಿದೆ. ಇದನ್ನೂ ಓದಿ : Goa Politics : ಗೋವಾದಲ್ಲಿ 8 ಕಾಂಗ್ರೆಸ್ ಶಾಸಕರು ಬಿಜೆಪಿಗೆ?

ಪಕ್ಷದ ದೊಡ್ಡ ನಾಯಕರನ್ನು ಭೇಟಿ ಮಾಡಲು ದೆಹಲಿಗೆ ಬರುವಂತೆ ಎಎಪಿ ಶಾಸಕರನ್ನು ಕೇಳಲಾಗಿದೆ ಮತ್ತು ಪಕ್ಷವನ್ನು ಬದಲಾಯಿಸಲು ಕೋಟಿ ರೂಪಾಯಿಗಳ ಆಫರ್ ಮಾಡಲಾಗಿದೆ ಎಂದು ಪಂಜಾಬ್ ಸಚಿವ ಹರ್ಪಾಲ್ ಚೀಮಾ ಆರೋಪಿಸಿದ್ದಾರೆ.

ಈ ತಿಂಗಳ ಆರಂಭದಲ್ಲಿ ಅರವಿಂದ್ ಕೇಜ್ರಿವಾಲ್ ನೇತೃತ್ವದ ಪಕ್ಷವು ಬಿಜೆಪಿಯು ತನಿಖಾ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ ಮತ್ತು ಬಿಜೆಪಿಗೆ ಸೇರಲು ತನ್ನ ದೆಹಲಿಯ ಕೆಲವು ಶಾಸಕರಿಗೆ ತಲಾ 20 ಕೋಟಿ ನೀಡುವುದಾಗಿ ಹೇಳಿದೆ ಎಂದು ಆರೋಪಿಸಿತ್ತು.

ಆರೋಪ ತಳ್ಳಿಹಾಕಿದ ಬಿಜೆಪಿ :

ಪಂಜಾಬ್ ಸಚಿವ ಹರ್ಪಾಲ್ ಚೀಮಾ ಅವರು ಬಿಜೆಪಿ ವಿರುದ್ದ ರಾಜ್ಯ ಸರ್ಕಾರವನ್ನು ಪತನಗೊಳಿಸಲು ಯತ್ನಿಸುತ್ತಿದೆ ಎಂಬ ಆಧಾರರಹಿತ ಆರೋಪವು ಪಂಜಾಬ್‌ನಲ್ಲಿ ಎಎಪಿ ದೊಡ್ಡ ವಿಭಜನೆಗೆ ಕಾರಣವಾಗುತ್ತಿದೆ ಎಂಬುದನ್ನು ತೋರಿಸುತ್ತದೆ. ಕೇಜ್ರಿವಾಲ್ ಅವರ ಹಸ್ತಕ್ಷೇಪದಿಂದ ಪಕ್ಷವು ಛಿದ್ರವಾಗುವ ಹಂತದಲ್ಲಿದೆ ಎಂದು ಬಿಜೆಪಿಯ ಸುಭಾಷ್ ಶರ್ಮಾ ಹೇಳಿದ್ದಾರೆ.

ಇದನ್ನೂ ಓದಿ : ಪಂಜಾಬ್ ಸಿಎಂ ಭಗವಂತ್ ಮನ್​​ ಮದುವೆ – ಪೋಟೋ ನೋಡಿ

LEAVE A REPLY

Please enter your comment!
Please enter your name here