ಹಳೇ ಮೈಸೂರು ಭಾಗದಲ್ಲಿ ಬಿಜೆಪಿ ಸಂಘಟನೆಗೆ ಕೇಂದ್ರ ಸಚಿವರ ನೇಮಕ

Old Mysuru - BJP

ರಾಜ್ಯದಲ್ಲಿ ಮುಂದಿನ ಚುನಾವಣಾ ತಯಾರಿಯನ್ನು ಬಿಜೆಪಿ ಈಗಾಗಲೇ ಆರಂಭಿಸಿದಂತಿದೆ. ಅದಕ್ಕನುಗುಣವಾಗಿ  ಹಳೆ ಮೈಸೂರು ( Old Mysuru) ಭಾಗದಲ್ಲಿ ಬಿಜೆಪಿ ಪಕ್ಷದ ಸಂಘಟನೆಗಾಗಿ ಕೇಂದ್ರ ಸಚಿವರನ್ನು ನೇಮಕ ಮಾಡಲಾಗಿದೆ.

ಹಳೆ ಮೈಸೂರು (Old Mysuru) ಭಾಗದ ಲೋಕಸಭಾ ಕ್ಷೇತ್ರಗಳಿಗೆ ಕೇಂದ್ರ ಸಚಿವರನ್ನು ಉಸ್ತುವಾರಿಗಳನ್ನಾಗಿ ಬಿಜೆಪಿ ಹೈಕಮಾಂಡ್ ನೇಮಕ ಮಾಡಿದೆ.

ನೇಮಕವಾದ ಕೇಂದ್ರ ಸಚಿವರ ಪಟ್ಟಿ : 

  1. ಮಂಡ್ಯ ಲೋಕಸಭಾ ಕ್ಷೇತ್ರ – ಗಜೇಂದ್ರ ಸಿಂಗ್ ಶೇಖಾವತ್
  2. ಹಾಸನ ಲೋಕಸಭಾ ಕ್ಷೇತ್ರ – ಕೃಷ್ಣ ಪಾಲ್ ಗುರ್ಜರ್
  3. ಬೆಂಗಳೂರು ಗ್ರಾಮಾಂತರ – ರವಿಶಂಕರ್

ನೇಮಕವಾದ ಕೇಂದ್ರ ಸಚಿವರಿಗೆ ಬೂತ್ ಮಟ್ಟದಲ್ಲಿ ಪಕ್ಷ ಸಂಘಟನೆ ಮಾಡುವ ಜವಾಬ್ದಾರಿ ನೀಡಿದೆ.

ಇದನ್ನೂ ಓದಿ : GST: ಮನೆ ಬಾಡಿಗೆಗೂ ಜಿಎಸ್​​ಟಿ..! 

ಬೂತ್​ಗಳನ್ನು A,B,C ಎಂದು 3 ವಿಧಗಳಾಗಿ ಬಿಜೆಪಿ ವಿಂಗಡಿಸಿದೆ. A ಎಂದರೆ ಬಿಜೆಪಿ ಅಧಿಕಾರಕ್ಕೆ ಬರುತ್ತದೆಂಬ ವಿಶ್ವಾಸ. B ಎಂದರೆ ಬಿಜೆಪಿಗೆ ಮತಗಳು ಬರುತ್ತವೆ ಆದರೆ, ಅಭ್ಯರ್ಥಿಗಳು ಇಲ್ಲ ಎನ್ನುವುದು. ಮತ್ತು C ಎಂದರೆ ಇಲ್ಲಿ ಬೇರೆ ಪಕ್ಷಗಳದೇ ಮೇಲುಗೈ ಎನ್ನುವುದು.

ಈ ಆಧಾರದ ಮೇಲೆ ಬಿಜೆಪಿ ತಳಮಟ್ಟದಲ್ಲಿ ಪಕ್ಷ ಸಂಘಟನೆಗೆ ಕೈ ಹಾಕಿದೆ.

(ನಟ ಗಣೇಶ್, ದಿಗಂತ್, ಪವನ್​ಕುಮಾರ್ ನಟನೆಯ ಯೋಗರಾಜ್ ಭಟ್ ನಿರ್ದೇಶನದ ಗಾಳಿಪಟ-2 ಚಿತ್ರದ ಪ್ರೇಕ್ಷಕರ ವಿಮರ್ಶೆ)

LEAVE A REPLY

Please enter your comment!
Please enter your name here