Apple Box : ಅಭಿಮಾನಿಗಳಿಗೆ ಸಿಹಿಸುದ್ದಿ ಕೊಟ್ಟ ನಟಿ ರಮ್ಯಾ – ಮತ್ತೆ ಚಿತ್ರರಂಗಕ್ಕೆ ಕಮ್​ಬ್ಯಾಕ್

Apple Box

ನಟಿ ಹಾಗೂ ರಾಜಕಾರಣಿ ರಮ್ಯಾ ಚಿತ್ರರಂಗಕ್ಕೆ ಮತ್ತೆ ಎಂಟ್ರಿ ಕೊಡುವುದಾಗಿ ಘೋಷಿಸುವ ಮೂಲಕ ತಮ್ಮ ಅಭಿಮಾನಿಗಳಿಗೆ ಸಿಹಿಸುದ್ದಿ ನೀಡಿದ್ದು, ಆ್ಯಪಲ್ ಬಾಕ್ಸ್​ (Apple Box) ಸಂಸ್ಥೆ ನಿರ್ಮಾಣ ಮಾಡಿದ್ದಾರೆ.

ನಟಿ ರಮ್ಯಾ ಅವರು ನೇರವಾಗಿ ನಟನೆಯ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಡದೇ ಇದ್ದರೂ ತಮ್ಮದೇ ಆದ ಚಿತ್ರ ನಿರ್ಮಾಣ ಸಂಸ್ಥೆ ಸ್ಥಾಪಿಸಿದ್ದಾರೆ.

ನಿರ್ಮಾಪಕಿಯಾಗಿ ಮತ್ತೆ ಚಿತ್ರರಂಗಕ್ಕೆ ಕಾಲಿಟ್ಟಿರುವ ರಮ್ಯಾ ಅವರು ಆ್ಯಪಲ್ ಬಾಕ್ಸ್ (Apple Box)​ ಎಂಬ ಸಿನೆಮಾ ನಿರ್ಮಾಣ ಸಂಸ್ಥೆ ಸ್ಥಾಪಿಸಿದ್ದಾರೆ. ಈ ಸಂಸ್ಥೆಯ ಮೂಲಕ ಚಿತ್ರಗಳು ಹಗೂ ವೆಬ್​ಸೀರಿಸ್​ಗಳನ್ನು ನಿರ್ಮಾಣ ಮಾಡುವುದಾಗಿ ತಿಳಿಸಿದ್ದಾರೆ. ಅಲ್ಲದೇ, ಈಗಾಗಲೇ  ಈ ಸಂಸ್ಥೆಯ ಅಡಿಯಲ್ಲಿ ಎರಡು ಚಿತ್ರಗಳನ್ನು ನಿರ್ಮಾಣ ಮಾಡಲು ನಿರ್ಧರಿಸಿದ್ದು, ಕೆಆರ್​ಜಿ ಸ್ಟುಡಿಯೋಸ್ ಚಿತ್ರದ ವಿತರಣೆ ಮಾಡಲಿದೆ ಎಂದು ರಮ್ಯಾ ತಿಳಿಸಿದ್ದಾರೆ.

Apple Box

ಒಟಿಟಿ ಫ್ಲಾಟ್​ಫಾರ್ಮ್​ಗಳಿಗಾಗಿ ಹಾಗೂ ವೆಬ್​ಸಿರೀಸ್​​ ಚಿತ್ರಗಳನ್ನು ನಿರ್ಮಾಣ ಮಾಡಲಾಗುವುದು ಹೆಚ್ಚಿನ ವಿವರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ತಿಳಿಸುತ್ತೇನೆ ಎಂದು ರಮ್ಯಾ ಹೇಳಿದ್ದಾರೆ.

ಇದನ್ನೂ ಓದಿ : Actress Ramya : ನಾಳೆ ಸಿಹಿಸುದ್ದಿ ಕೊಡ್ತಾರಂತೆ ನಟಿ ರಮ್ಯಾ – ಏನಿರಬಹುದು..?

ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಮಾಹಿತಿ ಹಂಚಿಕೊಂಡಿರುವ ಅವರು, ವಿಜಯ್ ಕಿರಗಂದೂರು, ಯೋಗಿ ಜಿ ರಾಜ್, ಜಯಣ್ಣ ಹಾಗೂ ಕಾರ್ತಿಕ್ ಗೌಡ ಅವರಿಗೆ ವಿಶೇಷ ಧನ್ಯವಾದಗಳನ್ನು ತಿಳಿಸಿದ್ದಾರೆ.

ಇದನ್ನೂ ಓದಿ : ಡಿಕೆಶಿ ‘ಆಫೀಸ್’ ಸಂಚು ಬಯಲು..! ಸಿಡಿದೆದ್ದ ನಟಿ ರಮ್ಯಾ

LEAVE A REPLY

Please enter your comment!
Please enter your name here