ಬಿಡುಗಡೆಯಾದ 20 ದಿನಗಳಲ್ಲಿಯೇ ಒಟಿಟಿಗೆ ಹೊರಟ ರಜನಿಯ ‘ಅಣ್ಣಾತ್ತೆ’

ಸೂಪರ್ ಸ್ಟಾರ್ ರಜನೀಕಾಂತ್ ನಾಯಕ ನಟನೆಯ ಅಣ್ಣಾತ್ತೆ ಚಿತ್ರ ಪ್ರಪಂಚದಾದ್ಯಂತ ಅದ್ದೂರಿಯಾಗಿ ಬಿಡುಗಡೆಯಾಗಿತ್ತು. ಇದೀಗ ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ಕೇವಲ 20 ದಿನಗಳಲ್ಲಿಯೇ ನೆಟ್ ಫ್ಲಿಕ್ಸ್​ ಒಟಿಟಿ ವೇದಿಕೆಯಲ್ಲಿ ಚಿತ್ರ ಪ್ರಸಾರವಾಗಲಿದೆ.

ನವೆಂಬರ್ 4 ರಂದು ತಮಿಳು, ಕನ್ನಡ, ತೆಲುಗು, ಮಲಯಾಳಂ ಹಾಗೂ ಹಿಂದಿ ಸೇರಿದಂತೆ ಐದು ಭಾಷೆಗಳಲ್ಲಿ ಚಿತ್ರ ಬಿಡುಗಡೆಯಾಗಿತ್ತು. ಒಟಿಟಿಯಲ್ಲಿಯೂ ಈ ಐದು ಭಾಷೆಗಳಲ್ಲಿ ಚಿತ್ರ ಬಿಡುಗಡೆಯಾಗಿದೆ.

ಶಿವ ನಿರ್ದೇಶನದ ಈ ಚಿತ್ರದಲ್ಲಿ ರಜನೀಕಾಂತ್​ ಅವರ ಜೊತೆಗೆ, ನಯನತಾರಾ ಹಾಗೂ ಕೀರ್ತಿ ಸುರೇಶ್ ಅವರು ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.

ಒಟ್ಟಾರೆಯಾಗಿ ಪ್ರಪಂಚದಾದ್ಯಂತ ಚಿತ್ರವು ಸುಮಾರು 4,500 ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ ಎಂದು ಹೇಳಲಾಗಿದೆ.

ಚಿತ್ರ ಬಿಡುಗಡೆಯಾಗಿ ಕೇವಲ 20 ದಿನಗಳಲ್ಲಿಯೇ ಒಟಿಟಿ ವೇದಿಕೆಗೆ ಹೋಗುತ್ತಿರುವ ಬಗ್ಗೆ ರಜನಿ ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದಾರೆ. ಇನ್ನು ಹಲವರು ತಾವು ಸಹಿತ ಒಟಿಟಿ ವೇದಿಕೆಯಲ್ಲಿ ಅಣ್ಣಾತ್ತೆ ಚಿತ್ರ ನೋಡುತ್ತಿರುವ ಬಗ್ಗೆ ಸಂತೋಷ ವ್ಯಕ್ತಪಡಿಸಿದ್ದಾರೆ.

LEAVE A REPLY

Please enter your comment!
Please enter your name here