ಬಿಜೆಪಿ ಮಾಜಿ ಮಂತ್ರಿಯ ಮಗನಿಂದ ಯುವತಿಯ ಹತ್ಯೆ : ಪೊಲೀಸರಿಂದ ರೆಸಾರ್ಟ್​ ಡೆಮಾಲಿಶ್

ರೆಸಾರ್ಟ್​​ನಲ್ಲಿ ಕೆಲಸ ಮಾಡುತ್ತಿದ್ದ ಯುವತಿಯ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರಾಖಂಡ್​ನ ಬಿಜೆಪಿ ಮಾಜಿ ಮಂತ್ರಿಯ ರೆಸಾರ್ಟ್​​​ನ್ನು ಪೊಲೀಸರು ಇಂದು ಬುಲ್ಡೋಜರ್​​ನಿಂದ ಹೊಡೆದುರುಳಿಸಿದ್ದಾರೆ(ಡೆಮಾಲಿಶ್).

ರೆಸಾರ್ಟ್​​​ನಲ್ಲಿ ಸ್ವಾಗತಕಾರಿಣಿಯಾಗಿ ಕೆಲಸ ಮಾಡುತ್ತಿದ್ದ ಯುವತಿ ಅಂಕಿತ ಭಂಡಾರಿ(19) ಎಂಬ ಯುವತಿಯ ಹತ್ಯೆ ಮಾಡಲಾಗಿತ್ತು. ಈ ಆರೋಪದಲ್ಲಿ ರೆಸಾರ್ಟ್​​ ಮಾಲೀಕ, ಮಾಜಿ ಮಂತ್ರಿ ವಿನೋದ್ ಆರ್ಯನ ಪುತ್ರ ಪುಲ್ಕಿತ್ ಆರ್ಯ ಹಾಗೂ ಇತರೆ ಇಬ್ಬರನ್ನು ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.

ಈ ಬೆನ್ನಲ್ಲೇ, ಪೌರಿ ಜಿಲ್ಲೆಯ ಯಮಕೇಶ್ವರ ತಾಲೂಕಿನಲ್ಲಿರುವ ರೆಸಾರ್ಟನ್ನು ಪೊಲೀಸರು ಇಂದು ಹೊಡೆದುರುಳಿಸಿದ್ದಾರೆ.

ಬಂಧಿತ ಮೂವರನ್ನು ಕೋಟ್‌ದ್ವಾರ ನ್ಯಾಯಾಲಯವು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಕಳುಹಿಸಿದೆ. ಸೋಮವಾರ ಬೆಳಗ್ಗೆ ಆಕೆಯ ಕೊಠಡಿಯಲ್ಲಿ ಪತ್ತೆಯಾಗದ ಹಿನ್ನೆಲೆಯಲ್ಲಿ ಯುವತಿಯ ಪೋಷಕರು ಕಂದಾಯ ಪೊಲೀಸ್ ಹೊರಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದರು.

LEAVE A REPLY

Please enter your comment!
Please enter your name here